ಮನದ ಮಂದಿರದಲ್ಲಿ ಮೀಟುವೆ ನಾದವ
ಮೊಗದಲ್ಲೇಕೆ ಈರೀತಿ ಮೌನ....
ತಂತಿಯು ನುಡಿಸುತಿರಲು ರಾಗವ
ಹಾಡಲಾರೆಯಾ ಒಂದು ಕವನ...
ನಿನ್ನ ಕಣ್ಣ ಓರೆ ನೋಟ
ನೀಳ ಮೂಗು ಎಂತ ಮಾಟ...
ಮುಂಗುರುಳ ಅಲೆದಾಟ
ಮನದಲ್ಲಿ ತೊಳಲಾಟ...
ತಲೆಯಲ್ಲಿ ಹಣ್ಣ ಬುಟ್ಟಿ
ಎಲ್ಲೋ ನೋಡುವ ನಿನ್ನ ದಿಟ್ಟಿ...
ನುಡಿಸುತಿರಲು ನೀ ತಂಬೂರಿ
ಕುಣಿಯುತಿದೆ ಮನದ ಮಯೂರಿ...