ಅಂಬೆ ಕಾಲಿಕ್ಕುತ ಬಂದ
ಕೈಯ್ಯಲಿ ಕೊಳಲು ನೋಡಲು ಚೆಂದ
ಉಟ್ಟಿಹ ಪೀತಾಂಬರ ಅಂದವೋ ಅಂದ
ಇವನೇ ನಮ್ಮ ಬಾಲ ಮುಕುಂದ...
ಶಿರದಲಿ ಶೋಭಿಪ ನವಿಲುಗರಿ
ನೀಲ ವರ್ಣ ನಮ್ಮ ಮುರಾರಿ
ಹಣೆಯಲಿ ತಿಲಕ ಕಾಲಲಿ ಗೆಜ್ಜೆ
ಬರುವನು ಇಟ್ಟು ಪುಟ್ಟ ಹೆಜ್ಜೆ...
ನವನೀತ ಚೋರ ಈ ಪುಟ್ಟ ಪೋರ
ಮಾಡುವ ಮೋಡಿಯ ತುಂಟ ಕುಮಾರ
ದೇವಕಿ ಯಶೋಧರ ಮುದ್ದಿನ ಕುವರ
ಬಾಲ ಲೀಲೆಯು ಇವನದತಿ ಮಧುರ...
ಕೃಷ್ಣ ಗೋವಿಂದ ಗೋಪಾಲನು ಇವನೆ
ಭಕ್ತಿಲಿ ಬೇಡಲು ತೋರುವ ಕರುಣೆ...
ಮಾಡುವ ಇವನ ದಿನವು ಸ್ಮರಣೆ
ಪರಿಹರಿಸುವ ಇವ ನಮ್ಮಯ ಬವಣೆ...
ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
|| ಶ್ರೀ ಕೃಷ್ಣಾರ್ಪಣಮಸ್ತು....||
ಕೃಷ್ಣನ ಕವನ ಅವನಷ್ಟೇ ಸುಂದರ!
ReplyDeleteಚಂದಾಗಿದೆ ಕವನ, ಜನ್ಮಾಷ್ಟಮಿ ಶುಭಾಶಯ , ಆದಷ್ಟು ಬೇಗ ಪುಟ್ಟ ಕೃಷ್ಣ ಬರಲಿ ನಿಮ್ಮ ಬಾಳಲಿ.
ReplyDeleteಧನ್ಯವಾದಗಳು ಮೂರ್ತಿ ಸರ್...
ReplyDeleteಧನ್ಯವಾದಗಳು ಪರಾಂಜಪೆ ಸರ್... ನಿಮಗೂ ಜನ್ಮಾಷ್ಟಮಿ ಶುಭಾಶಯಗಳು ...
ReplyDeleteಕವನ ರಾಶಿ ಚೊಲೋ ಇದ್ದು..
ReplyDeleteಪ್ರಗತಿ ಮೇಡಮ್,
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರಿ....... ನಿಮಗೂ ಹಬ್ಬದ ಶುಭಾಶಯ..
ದಿಲೀಪ್
ReplyDelete:-)
ಧನ್ಯವಾದಗಳು ದಿನಕರ ಸರ್...
ReplyDeleteಕವನ ಮಧುರವಾಗಿ ಸು೦ದರವಗಿ ಮೂಡಿದೆ. ಕೃಷ್ಣಜನ್ಮಾಷ್ಠಮಿಯ ಶುಭಾಶಯಗಳು.
ReplyDeleteಹಡೆದರೆ ಹಾಡಲು ಬರುವ ಕವನ ಹಡೆಯ ಬೇಕೆಂಬುದು ನನ್ನ ಬಯಕೆ, ನೀವೂ ಹಡೆದಿರಿ ಸದ್ಯಕ್ಕೆ ಹಾಡುವ ಚಂದದ ಕವನ! ಮುಂದೆ ಹಡೆಯಿರಿ ಕೃಷ್ಣನಂಥಾ ಮುದ್ದು ಮಗನ!ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು
ReplyDeleteಮುದ್ದುಕೃಷ್ಣನ ಚೆ೦ದದ ಕವನ..
ReplyDeleteಸ೦ತಸಗೊ೦ಡಿತು ಎಲ್ಲರಾ ಮನ
ಮಾಡುವೆ ಕೃಷ್ಣಗೆ ನನ್ನಯ ನಮನ.
ಕೃಷ್ಣಾಷ್ಟಮಿಯ ಶುಭಾಶಯಗಳು.
ತುಂಬ ಮಧುರವಾದ ಹಾಗು ಗೇಯವಾದ ಗೀತೆ.
ReplyDeleteಕೃಷ್ಣಾಷ್ಟಮಿಯ ಶುಭಾಶಯಗಳು.
ಪ್ರತಿಕ್ರಿಯಿಸಿದ ಸೀತಾರಾಮ್ ಸರ್ ಗೆ ನಮನಗಳು....
ReplyDeleteವಂದನೆಗಳು ಭಟ್ ಸರ್.... ಒಂದು ಕೋರಿಕೆ, ಮೊದ್ಲು ಪುಟ್ಟ ಗೌರಿ ಬರಲಿ ಅಂತ ಹರಸಿ ಸರ್ ;-) ...
ReplyDeleteಕವನದೊಂದಿಗೆ ಪ್ರತಿಕ್ರಿಯಿಸಿದ ಮನಮುಕ್ತಾ ಮೇಡಂ ಗೆ ಧನ್ಯವಾದ...
ReplyDeleteಧನ್ಯವಾದಗಳು ಸುನಾಥ್ ಸರ್...
ReplyDeletenimgoo krishnashtamiya shubbashayagalu. SriKrishnana eshtu varnisidaroo saaladu... kavana chennagide.
ReplyDeletethanks.
ಚಂದ್ರು ಅವರಿಗೆ ಧನ್ಯವಾದಗಳು...
ReplyDeleteಚಂದದ ಕೃಷ್ಣನಿಗೆ
ReplyDeleteಚಂದದ ಕವನ
ಚಂದವಾಗಿದೆ :)
ಧನ್ಯವಾದಗಳು ದೊಡ್ಡಮಂಜುಅವರಿಗೆ... ಆಗಾಗ ಚಿತ್ತಾರಕ್ಕೆ ಬರುತ್ತಿರಿ ...
ReplyDeleteನ೦ದನ ನ೦ದಗೆ ಎಷ್ಟು ಸ್ತುತಿಸಿದರೂ ಆನ೦ದವೇ..
ReplyDeleteಮನಮೋಹಕ ಚಿತ್ರ, ಮನತು೦ಬಿಸಿದ ಚಿತ್ರಣ..
ಧನ್ಯವಾದಗಳು.. ಪ್ರಗತಿ..
ಅನ೦ತ್
ಎಷ್ಟು ಚೆನ್ನಾಗಿ ಬರದ್ಯೇ ಪ್ರಗತಿ...ಹಿಂಗೆ ಬರೀತಾ ಇರು!!
ReplyDeleteಪ್ರಗತಿ ಕವನ ಸೊಗಸಾಗಿದೆ.ಇಷ್ಟ ಆಯ್ತು.
ReplyDeleteಅನಂತಾನಂತ ಕೃಷ್ಣನ ಕವನವನ್ನು ಇಷ್ಟಪಟ್ಟಿರುವ ಅನಂತ್ ಸರ್ ಗೆ ಹೃತ್ಪೂರ್ವಕ ಧನ್ಯವಾದಗಳು...
ReplyDeleteಥ್ಯಾಂಕ್ಸ್ ಸುಮನಕ್ಕ... ಚಿತ್ತಾರಕ್ಕೆ ಸ್ವಾಗತ... ಪ್ರೋತ್ಸಾಹ ಹಿಂಗೇ ಇರ್‍ಲಿ...
ReplyDeleteಕವನವನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ ಶಶಿ ಚಿಕ್ಕಿಗೆ ಧನ್ಯವಾದ... ಆಗಾಗ ಬಂದು ಪ್ರೋತ್ಸಾಹಿಸಿ...
ReplyDeletemadam, mudhu krishna edhdhu baruva hagidhe ee kavana.
ReplyDeletenanna blogge banni
ಧನ್ಯವಾದಗಳು ವಸಂತ್...
ReplyDeleteಚಿತ್ತಾರಕ್ಕೆ ಸ್ವಾಗತ Badarinath ಅವರಿಗೆ ... ಆಗಾಗ ಬರುತ್ತಿರಿ ... ಧನ್ಯವಾದಗಳು..
ReplyDeletewow:))..very nice.
ReplyDeleteHabba Jora??
ಥ್ಯಾಂಕ್ಸ್ ವನಿತಾ ಅವರಿಗೆ... ಹಬ್ಬ ಸುಮಾರ್ ಜೋರಾಗೆ ಆಯ್ತು... ಆಗಾಗ ಬರುತ್ತಿರಿ...
ReplyDeleteಮುದ್ದಾದ ಕವನ....
ReplyDeleteಧನ್ಯವಾದಗಳು ಮಹೇಶ್ ಅವರೇ...
ReplyDeletechannagide
ReplyDelete