Tuesday, October 19, 2010

ಏತಕೆ ಈ ಮೌನ..???



                                                      ಮನದ ಮಂದಿರದಲ್ಲಿ ಮೀಟುವೆ ನಾದವ
                                            ಮೊಗದಲ್ಲೇಕೆ ಈರೀತಿ ಮೌನ....
                                            ತಂತಿಯು ನುಡಿಸುತಿರಲು ರಾಗವ 
                                            ಹಾಡಲಾರೆಯಾ ಒಂದು ಕವನ...

                                                   ನಿನ್ನ ಕಣ್ಣ ಓರೆ ನೋಟ
                                                   ನೀಳ ಮೂಗು ಎಂತ ಮಾಟ...
                                                   ಮುಂಗುರುಳ ಅಲೆದಾಟ
                                                   ಮನದಲ್ಲಿ ತೊಳಲಾಟ...
            
                                             ತಲೆಯಲ್ಲಿ ಹಣ್ಣ ಬುಟ್ಟಿ
                                             ಎಲ್ಲೋ ನೋಡುವ ನಿನ್ನ ದಿಟ್ಟಿ...
                                             ನುಡಿಸುತಿರಲು ನೀ ತಂಬೂರಿ
                                             ಕುಣಿಯುತಿದೆ ಮನದ ಮಯೂರಿ...

25 comments:

  1. ಚಿತ್ರ ಮತ್ತು ಕವಿತೆ ಎರಡೂ ತು೦ಬಾ ಚೆನ್ನಾಗಿವೆ..

    ReplyDelete
  2. ಚಿತ್ರ ಮತ್ತು ಕವನ ಎರಡೂ ಸುಂದರ.ಅಭಿನಂದನೆಗಳು.

    ReplyDelete
  3. ಚನ್ನಾಗಿ ಬರ್ದಿದ್ದಿರ ಇನ್ನೊಂದು ನಾಲ್ಕು ಸಾಲು ಬರದಿದ್ದರೆ ಇನ್ನು ಸುಂದರವಾಗುತ್ತಿತ್ತೇನೋ ನಿಮ್ಮ ಕವನ ..!

    ReplyDelete
  4. ಪ್ರಗತಿ,
    ತುಂಬ ಚೆಲುವಾದ ಚಿತ್ರ; ಅಷ್ಟೇ ಸೊಗಸಾದ ಕವನ. ಎರಡಕ್ಕೂ ಅಭಿನಂದನೆಗು.

    ReplyDelete
  5. wow Excellent Feeling pragati. ನುಡಿಸುತಿರಲು ನೀ ತಂಬೂರಿ ..... Dileep?????

    ReplyDelete
  6. ಚುಕ್ಕಿ ಚಿತ್ತಾರ ಮೇಡಂ, ಕೃಷ್ಣಮೂರ್ತಿ ಸರ್, ದೊಡ್ ಮಂಜು, ತರುಣ್, ಸುನಾಥ್ ಸರ್, ವಸಂತ್, ವೆಂಕಟೇಶ್ ಸರ್, ಮಹೇಶ್ ಸರ್
    ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು... ಬರುತ್ತಿರಿ...

    ReplyDelete
  7. ಮನದ ಮಂದಿರದಲ್ಲಿ ಮೀಟುವೆ ನಾದವ
    ಮೊಗದಲ್ಲೇಕೆ ಈರೀತಿ ಮೌನ....
    ತಂತಿಯು ನುಡಿಸುತಿರಲು ರಾಗವ
    ಹಾಡಲಾರೆಯಾ ಒಂದು ಕವನ... ಇಷ್ಟವಾದ ಸಾಲುಗಳು.ಚಂದದ ಚಿತ್ರಕ್ಕೆ ಅಂದದ ಕವನದ ಅಲಂಕಾರ . ಚೆನ್ನಾಗಿದೆ.

    ReplyDelete
  8. ಪ್ರಗತಿ ಮೇಡಂ, ನೀವು ರಚಿಸಿದ ಚಿತ್ರ ಹಾಗೂ ಕವನ ಚೆನ್ನಾಗಿದೆ. ಇಷ್ಟವಾಯಿತು.

    ReplyDelete
  9. ಪ್ರಗತಿ ನಿಮ್ಮ ಚಿತ್ರದೊಟ್ಟಿಗೆ ನಿಮ್ಮ ಮೌನ ಇಷ್ಟವಾಯಿತು..

    ReplyDelete
  10. ಹೇಳುತಿದೆ ಎಲ್ಲವನು
    ಕಿವಿಗೆ ಕೇಳುವಂತೆ ,ಮಾತಾಡದೆ .
    ತೋರಿಸುತಿದೆ ಈ ಚಿತ್ರ ,
    ಜಗದ ವಿಚಿತ್ರವ ,ಮಾತಾಡದೆ .

    ReplyDelete
  11. ಧನ್ಯವಾದಗಳು ಬಾಲು ಸರ್, ಚಂದ್ರು ಸರ್, ಶಶಿ ಅಕ್ಕ ಹಾಗೂ ಚಿನ್ಮಯ್ ಅವರೇ... ಹೀಗೆ ಸ್ಪಂದಿಸುತ್ತಿರಿ..

    ReplyDelete
  12. ಪ್ರಗತಿ...ಸುಂದರ್ ಅತಿ ಸುಂದರ್...ಚಿತ್ರದೊಳಗಣ ಮನ ಲೇಖನಿಯಹೊಕ್ಕು ಅಕ್ಷರವಾಗಿ ಇಲ್ಲಿ ಮೂಡಿದೆ...ನಿಮ್ಮ ಹಿಂದಿನ ಪೋಸ್ಟ್ ನಲ್ಲೂ..ಪ್ರಕೃತಿಯ ಪರಿಣಿತರ ಪರಿಣಿತಿಗೆ ಕಾರಣ ಅಥವಾ ಗುರುಯಾರೆನ್ನುವ ಪ್ರಶ್ನಾವಳಿಯೂ ಚನ್ನಾಗಿದೆ.....ಕೀಪ್ ಇಟ್ ಅಪ್...

    ReplyDelete
  13. ಸುಂದರ ಕವನ. ಚಿತ್ರ ನೀವು ಬಿಡಿಸಿದ್ದೆ? ಚೆನ್ನಾಗಿದೆ

    ReplyDelete
  14. ಅಜಾದ್ ಸರ್, ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ... ಹೀಗೆ ಪ್ರೋತ್ಸಾಹಿಸುತ್ತಿರಿ...

    ReplyDelete
  15. ದೀಪಸ್ಮಿತಾ ಅವರೇ , ಚಿತ್ರ ಹಿಂದೊಮ್ಮೆ ನಾನೇ ಬಿಡಿಸಿದ್ದು... ಇದಕ್ಕೆ ಬಳಸಿಕೊಂಡೆ... ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ...

    ReplyDelete
  16. chitra tumba chennagide.... padagala hondanike innu chennagide.... olle kavana odisiddakke dhanyavadagalu....heege bareyuttiri.....

    ReplyDelete
  17. ಪ್ರಗತಿ ಯವರೇ,ಚಿಕ್ಕದಾಗಿದ್ದರೂ ಸುಂದರವಾಗಿದೆ ನಿಮ್ಮ ಕವನ .ಅಭಿನಂದನೆಗಳು

    ReplyDelete
  18. ಸೊಗಸಾದ ಸ್ಕೆಚ್, ಬಹಳ ಚೆನ್ನಾಗಿದೆ!! ಕವನ ಕೂಡ:)

    ReplyDelete
  19. ಕಲಾವತಿ ಮೇಡಂ, ರೂಪಶ್ರೀ ಮೇಡಂ, ಪ್ರವರ ಅವರೇ, ವಸಂತ್, ಸತೀಶ್ ಎಲ್ಲರಿಗೂ ತುಂಬಾ ಧನ್ಯವಾದಗಳು... ಲೇಟಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆ ಇರಲಿ...

    ReplyDelete
  20. really nice poem as well as sketch ..:) ishta aatu :)

    ReplyDelete
  21. ಪರವಾಗಿಲ್ಲ. ಕಣ್ರೀ. ಚನ್ನಾಗಿಗದೆ, ಅಂದಹಾಗೆ ನನ್ನ ಹೆಸರು ಸುರೇಶ್ಚಂದ್ರ

    ReplyDelete