Tuesday, December 7, 2010

ಮೌನದ ಮನೆ ಸೇರಿದಾಗ....

ಮನದ ಹಕ್ಕಿ 
ರೆಕ್ಕೆ ಬಿಚ್ಚಿ 
ಹಾರಬಯಸಿದೆ..
ನೋಟದಲ್ಲೇ  ಮುದ್ದುಗರೆವ 
ಗೆಳೆಯನಪ್ಪುಗೆ
ಬಯಸಿದೆ..
ಬಾಂದಳದ ಚಂದ್ರ 
ನಮ್ಮನೋಡಿ 
ನಕ್ಕಂತೆನಿಸಿದೆ..
ಅಲೆ ಅಲೆಯಾಗಿ 
ಬೀಸೋ ಗಾಳಿ 
ಏನೋ ಹೇಳಿದಂತಿದೆ..
ಜಾಜಿ ಹೂವು ಪಾರಿಜಾತ 
ಬಿರಿದು 
ಹಾರೈಸಿದಂತಿದೆ.. 
ಬೆರಳುಗಳೊಳಗೆ 
ಬೆರಳ ಬೆರೆಸೆ
ಪ್ರೀತಿ ಮಾತು ಮೂಡಿದೆ..
ದೂರದಿಂದ 
ಕೇಳುತಿಹ  ಹಾಡು 
ಮಧುರವಾಗಿದೆ..
ಅರಳುತಿರುವ 
ಮಲ್ಲೆ ಮೊಗ್ಗು ಈ 
ಖುಷಿಯ ಜೊತೆಗಿದೆ.. 
ನಿನ್ನ ತೋಳ 
ಬಂಧಿಯಾಗೆ 
   ಮೌನ ಮನೆಯ ಮಾಡಿದೆ..

42 comments:

  1. ಸು೦ದರ ತಾಣಕ್ಕೊ೦ದು ಸು೦ದರ ಕವನ ಮಧುರ ಭಾವಗಳನ್ನು ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿದೆ. ಶುಭಾಶಯಗಳು.


    ಅನ೦ತ್

    ReplyDelete
  2. ನಿನ್ನ ತೋಳ
    ಬಂಧಿಯಾಗೆ
    ಮೌನ ಮನೆಯ ಮಾಡಿದೆ Very Nice Feeling

    ReplyDelete
  3. ಬಾಂದಳದ ಚಂದ್ರ
    ನಮ್ಮನೋಡಿ
    ನಕ್ಕಂತೆನಿಸಿದೆ..
    ಅಲೆ ಅಲೆಯಾಗಿ
    ಬೀಸೋ ಗಾಳಿ
    ಏನೋ ಹೇಳಿದಂತಿದೆ.. ಇಷ್ಟವಾದ ಸಾಲುಗಳು ಕವಿತೆ ಸುಂದರವಾಗಿ ಮೂಡಿಬಂದಿದೆ, ಗುಡ್


    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  4. ಸುಂದರ ಕವನ.ತುಂಬಾ ಇಷ್ಟವಾಯಿತು.ಅಭಿನಂದನೆಗಳು.

    ReplyDelete
  5. ಪ್ರಗತಿ...

    ಕವನದ ಭಾವಾರ್ಥ ಚೆನ್ನಾಗಿ ಮೂಡು ಬಂದಿದೆ...

    ಅಭಿನಂದನೆಗಳು...

    ReplyDelete
  6. ಚೆನ್ನಾಗಿದೆ ಕವನ ಪ್ರಗತಿ ಕೊನೆಯ ಸಾಲುಗಳು ತುಂಬಾ ಇಷ್ಟ ಆಯ್ತು.

    ReplyDelete
  7. ಕವನದ lyrical quality ತುಂಬ ಮೆಚ್ಚುಗೆಯಾಯ್ತು.

    ReplyDelete
  8. ಧನ್ಯವಾದಗಳು ಅನಂತರಾಜ್ ಸರ್... ಆಶೀರ್ವಾದ ಹೀಗೆ ಇರಲಿ...

    ReplyDelete
  9. ಕವನ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಗುರುಮೂರ್ತಿ ಸರ್...

    ReplyDelete
  10. ಮಂಜುಳದೇವಿ ಅವರಿಗೆ ಚಿತ್ತಾರಕ್ಕೆ ಆತ್ಮೀಯ ಸ್ವಾಗತ... ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು..

    ReplyDelete
  11. ವೆಂಕಟೇಶ್ ಸರ್... ಕವನದ ಭಾವನೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  12. ಧನ್ಯವಾದಗಳು ಬಾಲು ಸರ್... ಪ್ರೋತ್ಸಾಹ ಹೀಗೆ ಇರಲಿ...

    ReplyDelete
  13. ತುಂಬಾ ಧನ್ಯವಾದಗಳು ಮೂರ್ತಿ ಸರ್... ಬರುತ್ತಿರಿ..

    ReplyDelete
  14. ಸೀತಾರಾಮ್ ಸರ್.. ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  15. ಪ್ರಕಾಶಣ್ಣ ತುಂಬಾ ಧನ್ಯವಾದಗಳು...

    ReplyDelete
  16. ಶಶಿ ಚಿಕ್ಕಿ... ಕವನದ ಸಾಲುಗಳನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ...

    ReplyDelete
  17. ಧನ್ಯವಾದಗಳು ಸೌಮ್ಯ ಅವರೇ.. ಆಗಾಗ ಬರುತ್ತಿರಿ...

    ReplyDelete
  18. ಸುನಾಥ್ ಸರ್... ಪ್ರತಿಕ್ರಿಯೆಗೆ ಧನ್ಯವಾದಗಳು... ಹೀಗೆ ಪ್ರೋತ್ಸಾಹಿಸುತ್ತಿರಿ...

    ReplyDelete
  19. ತುಂಬಾ ಚಂದದ ಸಾಲುಗಳು, ಪ್ರಿತಿಯನ್ನ ಸಾಲುಗಳಲ್ಲಿ ಹಿಡಿದಿಟ್ಟ ಬಗೆ ಇಷ್ಟವಾಯಿತು . ಒಳ್ಳೆಯ ಕವಿತೆ


    ನನ್ನವಳಲೋಕಕ್ಕೋ ಬನ್ನಿ ...
    SATISH N GOWDA

    ReplyDelete
  20. sakattaagidde koose! chaligaalakke sarihonduva kavana!!

    ReplyDelete
  21. ಕವನ ಕಲ್ಪನೆ ಚೆನ್ನಾಗಿದೆ! ಶುಭಾಶಯಗಳು

    ReplyDelete
  22. ಪ್ರತಿಕ್ರಿಯೆಗೆ ಧನ್ಯವಾದಗಳು ಸತೀಶ್ ಅವರೇ...

    ReplyDelete
  23. ಸುಮನಕ್ಕ, ತುಂಬಾ ಥ್ಯಾಂಕ್ಸ್.. ಪ್ರೋತ್ಸಾಹ ಹಿಂಗೇ ಇರ್ಲಿ...

    ReplyDelete
  24. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಭಟ್ ಸರ್... ಬರುತ್ತಿರಿ...

    ReplyDelete
  25. pragati yavare very nice poem.abhinandanegalu.

    ReplyDelete
  26. ಕವನ ಅದರೊಳಗಿನ ಕಲ್ಪನೆ.. ಚೆನ್ನಾಗಿದೆ..

    ReplyDelete
  27. chenagide madam.. ondu mugdate matu uttam bhavartatinda kudide.. nice one..thanks

    ReplyDelete
  28. ಧನ್ಯವಾದಗಳು ಕಲಾವತಿ ಮೇಡಂ...

    ReplyDelete
  29. ಚಂದ್ರು ಸರ್, ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.. ಬರುತ್ತಿರಿ..

    ReplyDelete
  30. ತರುಣ್ ಅವರೇ, ಧನ್ಯವಾದಗಳು...

    ReplyDelete
  31. ಸುಂದರ ಕವನ ...

    ಹೊಸ ವರ್ಷದ ಶುಭಾಶಯಗಳು.

    ReplyDelete
  32. ಪ್ರಗತಿ, ಕ್ಷಮೆಯಿರಲಿ...ಬಹಳ ದಿನಗಳ ನಂತರ ನಿಮ್ಮಲ್ಲಿಗೆ ಬರ್ತಿದ್ದೇನೆ...
    ಬೆರಳ ಜೊತೆ ಬೆರಳ ಬೆರೆಸಿ ಬೆರೆತು ಬೇರೆಯಾಗದಂತಿದೆ...ಹಾಹಹ ಸುಂದರ ಭಾವ... ಎಲ್ಲಿ ದಿಲೀಪ್ ಕಾಣ್ತಿಲ್ಲ...?? ಹಹಹಹ

    ReplyDelete
  33. ಪ್ರಗತಿಯವರೇ,

    ಚೆನ್ನಾಗಿದೆ.ಇಷ್ಟವಾಯಿತು :)

    ~ಸುಷ್ಮ

    ReplyDelete