Saturday, February 26, 2011

ನಾನೇನ ನೀಡಲಿ ಗೆಳೆಯಾ??

ಚಿತ್ರಕೃಪೆ: ಅಂತರ್ಜಾಲ

ಗೆಳೆಯಾ..

ನೀ ನೀಡಿದ ಮುತ್ತಿನ ಮಳೆಗೆ
ನಾ  ಏನ ನೀಡಲಿ ಕೊಡುಗೆ..?

ಬಾಳ ಬಂಡಿಯಲಿ ಜೊತೆಯಾದ ಸುಂದರ
 ಮನಸಿನ ಮಂದಿರಕೆ ನೀನಾದೆ ಸರದಾರ..


ಹರಿಸಿದೆ ಪ್ರೇಮದ ಮಹಾಪುರ
 ಪೋಣಿಸಿದೆ ಆಸೆಯ ನೂಪುರ..

ಹಾಲು ಜೇನಂಥ ಅನುಬಂಧವ ಬೆಸೆದೆ
  ಕನಸಿಗೆ ಕನಸ ಜೊತೆಯಲ್ಲೇ ಹೊಸೆದೆ..

ಕಣ್ಣಲ್ಲಿ ಕಣ್ಣಿಟ್ಟು ಹರಿಸಿದೆ ಒಲವ
  ಭಾವನೆಗಳ ಪೋಷಿಸಿದ ಚೆಲುವ..

ಜೀವನದ ಹಾದಿಗೆ ನೀ ಹಾಸಿದೆ ರತ್ನಗಂಬಳಿ
     ಹೇಳು ನಾನೇನ ನೀಡಲಿ ನಿನಗಾಗಿ ಬಳುವಳಿ..?      
  

   


18 comments:

  1. ನಿಮ್ಮಿಬ್ಬರ ಪ್ರೇತಿ.. ಪ್ರೇಮ ಹೀಗೆಯೇ..
    ಅನುಗಾಲವೂ ..
    ಹಸಿರಾಗಿರಲಿ... !

    ಸುಂದರ ಕವನ...

    ReplyDelete
  2. ಕವನ ಚೆನ್ನಾಗಿ ಮೂಡಿಬಂದಿದೆ

    ReplyDelete
  3. ಸುಂದರ ಕವನ ಪ್ರಗತಿ ಮೇಡಂ.ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

    ReplyDelete
  4. ಪ್ರಗತಿ..ಸುಂದರ ಅರ್ಪಣ ಭಾವಪ್ರಕಟ..ಬಹಳ ಮುದ್ದೆನಿಸುವ ಸಾಲುಗಳು.. ಸರಳ ಮತ್ತು ಮನಮುಟ್ಟುವ ಸಾಲುಗಳಲ್ಲಿ ಇದು ಮೆಚ್ಚುಗೆಯಾದದ್ದು...
    ಬಾಳ ಬಂಡಿಯಲಿ ಜೊತೆಯಾದ ಸುಂದರ
    ಮನಸಿನ ಮಂದಿರಕೆ ನೀನಾದೆ ಸರದಾರ..

    ReplyDelete
  5. ಪ್ರಗತಿ ಯವರೇ,
    ಭಾವಗಳ ಅನಾವರಣ ಚೆನ್ನಾಗಿದೆ.ಅಭಿನ೦ದನೆಗಳು.

    ReplyDelete
  6. ಪ್ರೇಮಕ್ಕೆ ಪ್ರತಿಯಾಗಿ ಒಲವ ಧಾರೆಯನ್ನಲ್ಲದೆ ಇನ್ನೇನು ಕೊಟ್ಟರೆ ಸಾಟಿಯಾದೀತು ಪ್ರಗತಿ..ಪ್ರೇಮಾಮೃತವನ್ನೇ ಹರಿಸಿಬಿಡಿ ಒಲವಿತ್ತ ಗೆಳೆಯನಿಗೆ...;)
    ಸುಂದರ ಭಾವಸ್ಪುರಣೆಯ ಚಂದದ ಕವನ ...ಪ್ರಗತಿ. ಈ ಒಲವ ಮರ ಹೀಗೆ ಬೆಳೆದು ಹಣ್ಣು ಹೂಗಳಿಂದ ಕಂಗೊಳಿಸಲಿ ಎಂಬ ಹಾರೈಕೆ.

    ReplyDelete
  7. ಪ್ರಗತಿ,
    ಈ ಭಾವಪೂರ್ಣ ಕವನವೇ ಬಾಳಗೆಳೆಯನಿಗೆ ನೀವು ನೀಡಿದ ಮಧುರ ಕೊಡುಗೆಯಾಗಿದೆ!

    ReplyDelete
  8. Nice Pragathi thumba chennagidhe

    ReplyDelete
  9. ಹಾಕಿರೋ ಫೋಟೋಕ್ಕೂ ಬರೆದಿರೋ ಕವನಕ್ಕೂ
    ಮನಸಿನ ಭಾವಕ್ಕೂ ಯದ್ವಾ ತದ್ವಾ ಸಕತ್ combination.
    ತುಂಬಾ ಚಂದಿದ್ದು.
    ರಾಶಿ ಖುಷಿ ಕೊಟ್ಟತ್ತು.

    ReplyDelete
  10. ಮಹಾಬಲ ಗಿರಿ ಅವರಿಗೆ ಚಿತ್ತಾರಕ್ಕೆ ಸ್ವಾಗತ.. ನಿಮ್ಮ ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಪ್ರೋತ್ಸಾಹನೀಡಲಿ.. ಧನ್ಯವಾದಗಳು..

    ReplyDelete
  11. ಪ್ರಕಾಶಣ್ಣ, ನಿಮ್ಮ ಹಾರೈಕೆಗೆ ಹೃತ್ಪೂರ್ವಕ ಧನ್ಯವಾದಗಳು... ಕವನ ಮೆಚ್ಚಿಗೆಯಾಗಿದ್ದಕ್ಕೆ ಧನ್ಯೋಸ್ಮಿ... :-) ಜೈ ಹೋ..

    ReplyDelete
  12. ಮಂಜುಳಾ ದೇವಿಯವರೇ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು..

    ReplyDelete
  13. ಕೃಷ್ಣಮೂರ್ತಿ ಸರ್, ವೆಂಕಟೇಶ್ ಸರ್, ವಸಂತ್ ಎಲ್ಲರಿಗೂ ತುಂಬಾ ಧನ್ಯವಾದಗಳು.. ಬರುತ್ತಿರಿ..

    ReplyDelete
  14. ಪ್ರೀತಿಯ ಪಯಣ ಹೀಗೆ ಸಾಗುತ್ತಲಿರಲಿ

    ReplyDelete
  15. Sooper pragathi... ee kavanavannu odi heli saaku.. innenu baluvaliyannu keluvudilla namma dileepa :)

    Dhanyavaada
    Pravi

    ReplyDelete