Wednesday, August 1, 2012

ಬದುಕಿನ ದಾರಿ ...



ನಾವಂದು ಜೊತೆಯಾಗಿ ನಡೆದಂತ ಹಾದಿಯದು
ನೂರಾರು ಕನಸುಗಳ ನೆನಪಿಸುವ ಬೀದಿಯದು
ನೀನೊಮ್ಮೆ ತಿರುಗಿ ನೋಡಲ್ಲಿ ಹಾಸಿಹುದು ನಿನಗಾಗಿ 
ಕೆಂಪನೆಯ ರತ್ನಗಂಬಳಿ ಹಸಿರು ಮರಗಳ ನಡುವಲಿ..

ಹೋಗೋಣ ಇನ್ನೊಮ್ಮೆ ಜೊತೆಯಾಗಿ ಕೈ ಹಿಡಿದು
ಕಳೆಯೋಣ ಕ್ಷಣಗಳನು ಸಂಜೆಯ ಗಳಿಗೆಯಲಿ
ನೀನಂದು ನುಡಿದಂತ ಸಾಲನಿನ್ನೊಮ್ಮೆ ನೀಹೇಳು
ಕೇಳುವೆನು ತನ್ಮಯದಿ ನಿನ್ಹೆಗಲಿಗೊರಗಿ..

ಸುಖ ದುಃಖಗಳಲಿ ನಾನಿರುವೆ  ಜೊತೆಯಾಗಿ
ಬಾಳಲ್ಲಿ  ತುಂಬಿರಲಿ ಕಡಲಾಳದ ಪ್ರೀತಿ 
ನೆಮ್ಮದಿಯ ಜೀವನವು ನಮದಿರಲಿ ಅನುಗಾಲ
ಎಂದೆಂದೂ ಇರಲಿ ಜೀವನ ಇದೇ ರೀತಿ.. 

5 comments:

  1. ಅನನ್ಯ ಒಲುಮೆಯ ಪ್ರವಾಹದಂತಿದೆ ಈ ಕವನ. ಈ ಉತ್ಕಟ ಪ್ರೀತಿಯು ಚಿರಂತನವಾಗಿರಲಿ.

    ಉತ್ತಮ ಭಾವ ಲಯ ಭಾಷಾ ಸಂಗಮ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ಚೆನಾಗಿದೆ....ಮುಂದುವರೆಸಿ

    ReplyDelete
  3. ಕವನದಲ್ಲಿ ವ್ಯಕ್ತವಾಗಿರುವ ಪ್ರೀತಿಯ ಭಾವ ಇಷ್ಟವಾಯ್ತು.

    ReplyDelete
  4. ಕವನ ಭಾವಪೂರ್ಣವಾಗಿದೆ. ಶುಭಮಸ್ತು!

    ReplyDelete
  5. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು...

    ReplyDelete