ಅಂದು ನೀ ಭುವಿಗೆ ಬಂದ ದಿನವೇ
ನೀ ನನಗೆ ನೀಡಿದೆ 'ಅಮ್ಮ' ಎಂಬ ಪದವಿ
ನಗುವಲ್ಲಿ ಆಳುವಲ್ಲಿ ಆಟ ನೋಟಗಳಲ್ಲಿ
ನೀ ಕಳೆದೆ ನಾನನುಭವಿಸಿದಾ ನೋವ ..
ದಿನವುರುಳಿ ಹೋಗುತಿರೆ ಏರುತಿರೆ ತಂಟೆ
ಹೊರಳಾಡಿ ಹರಿದಾಡಿ ಬಿದ್ದು ಒದ್ದಾಡಿ
ಕುಳಿತು ನಿಂತು ಕುಣಿದಾಡಿ ಓಡಾಡಿ
ಆಗೇ ಹೋಯಿತು ನೋಡು ನಿನಗೊಂದು ವರ್ಷ...
ಆ ಸಂಭ್ರಮಕೆ ನಿನಗಿದೋ ನನ್ನ ಉಡುಗೊರೆ
ನಗುತಿರು ಹೀಗೆ ಮಂಜಿನ ಹಾಗೆ
ಕಷ್ಟ ಅಂಜಲಿ ನಿನ್ನ ನಗುವ ನೋಡಿ
ಇರಲಿ ಧೀರ್ಘಾಯುಷ್ಯ ನಿನ್ನ ಜೋಡಿ
ಕುಗ್ಗದಿರು ಹಿಗ್ಗದಿರು ಕೊರಗದಿರು ಮರುಗದಿರು
ಸ್ವಾಭಿಮಾನವ ಬಿಡದಿರು ಮತ್ತೆ
ಜನರೊಳಗೊಂದಾಗಿ ಬಾಳುವುದ ಕಲಿ ನೀನು
ಬೆಳೆಯಮ್ಮ ನಾವೆಲ್ಲ ಹೆಮ್ಮೆ ಪಡುವಂತೆ ...
ಆಶೀರ್ವಾದದೊಂದಿಗೆ -
ಅಪ್ಪ-ಅಮ್ಮ
(ನಭಾಳ 1ನೇ ವರ್ಷದ ಹುಟ್ಟಿದ ಹಬ್ಬದ(ಜೂನ್ 14) ಪ್ರಯುಕ್ತ)
ನೂರ್ಕಾಲ ಸಕಲ ಸಂಪತ್ತಿನ ಜೊತೆಗೆ, ಆನಂದ, ಆರೋಗ್ಯ, ವಿದ್ಯೆ, ಗೌರವ ಎಲ್ಲವೂ ನಿನಗೆ ಒಲಿದು ಬರಲಿ ಪುಟ್ಟ.
ReplyDeleteಶುಭಾಷಿರ್ವಾದಕ್ಕೆ ಧನ್ಯವಾದಗಳು ಸರ್...
Deleteabbaa..ondu varshaanaa putty ge.....
ReplyDeletehappy birthday putty....may god bless you....
aashirvaada niDida kavana chennaagide...
ಧನ್ಯವಾದಗಳು ಸರ್... ದಿನ ಓಡಿ ಓಡಿ ಹೋಗ್ತಾ ಇದ್ದಹಾಗಿದೆ... :)
Deleteಸಭಾಳಿಗೆ ಶುಭಾಶಯಗಳು. ನಿಮಗೆ ಅಭಿನಂದನೆಗಳು.
ReplyDeleteಧನ್ಯವಾದಗಳು ಸುನಾತ್ ಸರ್...
Deleteputtu marige shubhashayagalu..chendada kavana :)
ReplyDeleteಧನ್ಯವಾದಗಳು ವನಿತಾ ಅವ್ರೆ ... ಆಗಾಗ ಬರ್ತಾ ಇರಿ... :)
Deleteನಿಮ್ಮ ಕವಿತೆ ಓದಿ ನನ್ನ ಮಗಳು ಸಾಹಿತ್ಯನನ್ನು ನೆನಪಿಸಿಕೊಂಡೆ. ಸಭಾಳಿಗೆ ನನ್ನ ಕಡೆಯಿಂದ ಶುಭಾಶಯ.
ReplyDeleteನನ್ನ ಬ್ಲಾಗಿಗೂ ಭೇಟಿ ಕೊಡಿ ಒಂದು ವಿಭಿನ್ನ ಕಥೆ ಇದೆ.