Monday, December 1, 2014

ಹರೆಯ


 ಹೊರಟಿತ್ತು ಸವಾರಿ
೭೦ ರ ಹರೆಯದ
ದಂಪತಿಗಳು..
ಬದುಕನ್ನು ಸವರಿ
ಎಷ್ಟೆಷ್ಟೋ ಮರೆಯದ
ಸಂಗತಿಗಳು.... 

ಹಿಂದೊಂದು ದಿನ
ಆತ ಕುಳಿತಿದ್ದ
ಅಂಗಳದಿ..
ಗುಲಾಬಿಯ ಮುಡಿದು
ಬಂದಳಾಗ ಆತನ
ಪ್ರಿಯ ಮಡದಿ....

ಇಂದು ವಿಶೇಷಕೆ
ಏನ ಮಾಡಲಿ
ಸಿಹಿಯ..
ಎಂದು ಕೇಳಲು
ಹೇಳಿದನವಳ
ಇನಿಯ....

ಇಂದಿಗೆ ಒಂದು
ವರುಷ
ನಮ್ಮ ಬಾಳಿಗೆ..
ನೀ ತಂದೆ
ಹರುಷ
ನನ್ನ ಪಾಲಿಗೆ....

ನಿನಗೇನಿಷ್ಟ
ಅದೇ
ಆಗಲಿ..
ನಮ್ಮೀ ಬದುಕು
ನಗು ನಗುತ
ಸಾಗಲಿ....

ಅಂದು ಮಾಡಿದ್ದಳು
ಆ ಸತಿ ಅವನಿಷ್ಟದ
ಹೋಳಿಗೆ..
ಮೆಲಕು ಹಾಕುವರಿಂದು
೫೦ ರ ಬಾಂಧವ್ಯದ
ಬಾಳಿಗೆ....

ಇಂದಿಗೂ ಅದೇ
ಒಪ್ಪಂದ
ಅವರ ದಾಂಪತ್ಯದಲಿ..
ಇಂದೂ ೫೦ರ
ಹೋಳಿಗೆಯ
ಊಟ ಸಂತ್ರಪ್ತದಲಿ....

5 comments:

  1. ದಾಂಪತ್ಯ ಎಂದರೆ ಹೀಗಿರಬೇಕು, ಹೋಳಿಗೆಯ ಸವಿಯ ಹಾಗೆ! ರುಚಿಕಟ್ಟಾದ ಕವನಕ್ಕೆ ಅಭಿನಂದನೆಗಳು.

    ReplyDelete
  2. ಆತ್ಮೀಯ ಪ್ರೋತ್ಸಾಹಕ್ಕೆ ಧನ್ಯವಾದಗಳು ಸುನಾತ್ ಸರ್...

    ReplyDelete
  3. ಚಂದದ ಕವನ...ಬರೆಯುತ್ತಿರಿ :)

    ReplyDelete
  4. ಬಹಳ ದಿನಗಳ ನಂತರ ನಿಮ್ಮ ಕವನ ಓದಿ ಖುಷಿ ಆಯ್ತು .......ಬರೆಯುತ್ತಿರಿ.....!

    ReplyDelete
  5. ಧನ್ಯವಾದಗಳು ಚಿನ್ಮಯ್ ಮತ್ತು ಮಂಜುಳಾದೇವಿ ಅವರೆ.... ಪ್ರೋತ್ಸಾಹ ಹೀಗೇ ಇರಲಿ...

    ReplyDelete