Friday, January 9, 2015

ಕುಡಿಕಥೆ- ಕೋಪ

            ಅವಳು ಯಾವಾಗಲೂ ಹಾಗೆ... ಬೇಗ ಕೋಪಿಸಿಕೊಳ್ಳುತ್ತಾಳೆ.. ಅದೂ ಅಂತಿಂತ ಕೋಪವಲ್ಲ... ಭಯಂಕರ ಕೋಪ... ಅದಕ್ಕೇ ಅವಳ ಅಜ್ಜಿ ಹೇಳುತ್ತಿದ್ದುದು "ಅಪ್ಪನ ಸಿಟ್ಟೆಲ್ಲಾ ನಿನಗೇ ಬಂದಿದೆ" ಅಂತ... ಆ ಕೋಪಕ್ಕೆ ಅಂತಿಂತ ಕಾರಣವೇ ಇರಬೇಕೆಂದಿಲ್ಲ..." ನೀನು ಮಾಡಿದ್ದು ಸರಿಯಲ್ಲ" ಎಂದರೂ ಸಾಕು...
            ಈಗ ಅವಳ ಕಷ್ಟ ಕೇಳುವವರು ಯಾರೂ ಇಲ್ಲ. ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ತವರಿನ ಬಾಂಧವ್ಯವೂ ಇಲ್ಲ. ತನಗಿಂತ ದುಪ್ಪಟ್ಟು ಕೋಪವಿರುವ ಮಗನನ್ನು ಬೆಳೆಸುವ ಜವಾಬ್ದಾರಿ ಬೇರೆ.

2 comments:

  1. ಮೂಗಿನ ತುದಿಯಲ್ಲೇ ಕೋಪ ಇದ್ದವಳು, ಮೂಗನ್ನೇ ಕೊಯ್ದುಕೊಂಡಂತಾಯಿತಲ್ಲ!

    ReplyDelete
  2. ಕೋಪಕ್ಕೆ ತಕ್ಕ ಶಿಕ್ಷೆ

    ReplyDelete