Monday, July 4, 2016
Friday, January 22, 2016
ಧಿಕ್ಕಾರ ಹಂತಕರೆ...

ಮರೆಮಾಚಿ ಮೊಗವನ್ನು
ಏಕೆ ಕರೆದೊಯ್ಯುವಿರಿ
ತಿಳಿಯಲಿ ಜಗಕೆ ಇವರ ಬಣ್ಣ......
ಕಪ್ಪ ಮುಸುಕಿನಲಿ
ಮುಖವನ್ನು ಅಡಗಿಸಿ
ಕಾಣಿಸುವಿರೇಕೆ ಎರಡು ಕಣ್ಣ......
ಜನರ ನಡುವಲ್ಲೇ ಇದ್ದು
ರಕ್ತ ತರ್ಪಣವ ಗೈದು
ಮಾಡಿಹರು ನೆಮ್ಮದಿಯ ಮರೀಚಿಕೆ....
ಕಳೆಯಲಿ ಇಂತಹ ಕಳೆ
ತೊಲಗಲಿ ಅಶಾಂತಿಯ ಕೊಳೆ
ದೂಡಿರಿ ಇವರ ನರಕದಾಚೆಗೆ.....
ಜಾತಿಯ ಕಥೆಗಳು ಬೇಡ
ವಿದ್ಯಾವಂತರೆಂಬ ಬಿರುದು ಬೇಡ
ಹಂತಕರೆಂದರೆ ಹಂತಕರೇ.....
ಏರಿಸಿ ನೇಣಿಗೆ ಬಹಿರಂಗವಾಗಿ
ಹೋಗಲಿ ಉಗ್ರರು ನಾಶವಾಗಿ
ಯೋಚಿಸಿ ಒಮ್ಮೆ ಚಿಂತಕರೆ...
Sunday, January 17, 2016
ಕಟ್ಟುವೆನೊಂದು ಹೊಸ ಲೋಕ....
ಮನಸೆಂಬ ಮಗುವು
ಹಠಮಾಡಿ ಅಳುತಿಹುದು
ಹೇಗೆ ಸಮಾಧಾನಿಸುವುದದನು...
ಆಟಿಗೆಯ ಕೊಡಲು
ಬೇಸರದಿ ಎಸೆಯುವುದು
ಏನು ಬೇಕೆಂದು ಹೇಳಲದಕೆ ಬಾರದು...
ಹಸಿವಿರಬೇಕೆಂದು
ಇಷ್ಟ ಫಲವ ನಾ ನೀಡೆ
ನಿರಾಕರಿಸುವುದದನು ಈಗ ಬೇಡೆಂದು...
ಬಗೆ ಬಗೆಯ ರೀತಿಯಲಿ
ರಮಿಸಿ ಮುದ್ದನು ಮಾಡಿ
ಒಳ ಬೇಗೆ ಹೊರಬರಲು ಕಾಯುತಿಹೆನು...
ನಗುವಿನಲಿ ಕೇಕೆಹಾಕಲು
ಆಟ ಪಾಠದಿ ಜಗವ ಮರೆಯಲು
ಲೋಕವೊಂದ ನಾ ಕಟ್ಟ ಬಯಸಿಹೆನು...
ಹಠಮಾಡಿ ಅಳುತಿಹುದು
ಹೇಗೆ ಸಮಾಧಾನಿಸುವುದದನು...
ಆಟಿಗೆಯ ಕೊಡಲು
ಬೇಸರದಿ ಎಸೆಯುವುದು
ಏನು ಬೇಕೆಂದು ಹೇಳಲದಕೆ ಬಾರದು...
ಹಸಿವಿರಬೇಕೆಂದು
ಇಷ್ಟ ಫಲವ ನಾ ನೀಡೆ
ನಿರಾಕರಿಸುವುದದನು ಈಗ ಬೇಡೆಂದು...
ಬಗೆ ಬಗೆಯ ರೀತಿಯಲಿ
ರಮಿಸಿ ಮುದ್ದನು ಮಾಡಿ
ಒಳ ಬೇಗೆ ಹೊರಬರಲು ಕಾಯುತಿಹೆನು...
ನಗುವಿನಲಿ ಕೇಕೆಹಾಕಲು
ಆಟ ಪಾಠದಿ ಜಗವ ಮರೆಯಲು
ಲೋಕವೊಂದ ನಾ ಕಟ್ಟ ಬಯಸಿಹೆನು...
Thursday, December 31, 2015
ಹೊಸವರ್ಷ ತರಲಿ ಹೊಸಹರ್ಷ
Happy new year! Happy new year! ಅಂತ ಎಲ್ಲಾ Whatsapp ಗುೃಪ್ ಗಳಲ್ಲಿ message ಬರ್ತಾ ಇರ್ವಾಗ ಒಂದು ಗೃಪ್ನಲ್ಲಿನ ಸದಸ್ಯರೊಬ್ರು "ಅದು ಪಾಶ್ಚಾತ್ಯರ ಆಚರಣೆ. ನಮಗೆ ಯುಗಾದಿಯೇ ಹೊಸವರ್ಷ" ಅಂತ ಹೇಳಿದ್ರು. ಅದು ತಪ್ಪು ಅಂತ ಹೇಳ್ತಿಲ್ಲ.. ಆದ್ರೆ ಖುಷಿಯಾಗಿರ್ಲಿಕ್ಕು ಈತರ ಬಿಗುಮಾನ ಯಾಕೆ? ನಾವು ಅವ್ರಂತೆ ಪಾನಮತ್ತರಾಗಿ ಅಪರಾತ್ರಿಯಲ್ಲಿ ಅರೆಬಟ್ಟೆಯಾಗಿ ಆಚರಿಸೋದು ಬೇಡ. ಒಂದು ಸುಂದರ ಶುಭಾಷಯವನ್ನು ಪ್ರೀತಿಪಾತ್ರರಿಗೆ ಹೇಳುವ ಮೂಲಕ ಆಚರಿಸೋಣ. ಮನೆಲ್ಲಿ ಸಿಹಿತಿಂಡಿಯನ್ನು ಮಾಡಿ ತಿನ್ದು ಆಚರಿಸೋಣ. ಹೊಸ ವರ್ಷದ ನೆವದಲ್ಲಿ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳೋ ಮೂಲಕ ಆಚರಿಸೋಣ.
ಜನವರಿಯಿಂದ ಡಿಸೆಂಬರ್ ವರೆಗಿನ ಕ್ಯಾಲೆಂಡರ್ ಅನ್ನೇ ಯಾವುದೇ ಬದಲಾವಣೆ ಇಲ್ಲದಂತೆ ಬಳಸ್ತಿರುವಾಗ ಸ್ನೇಹಿತರ ಜೊತೆ ಸಂಬಂಧಿಕರ ಜೊತೆ ಶುಭಾಷಯ ವಿನಿಮಯ ಮಾಡಿಕೊಳ್ಳಿಕ್ಕೆ ಬಿಗುಮಾನ ಯಾಕೆ?? ಯುಗಾದಿಯನ್ನು ಇದಕ್ಕಿಂತ ಜೋರಾಗಿ ಆಚರಿಸಿದರಾಯ್ತು.. ಏನಂತೀರ..
ಎಲ್ಲರಿಗೂ ಹೊಸವರ್ಷ೨೦೧೬ ರ ಶುಭಾಷಯಗಳು...
ಜನವರಿಯಿಂದ ಡಿಸೆಂಬರ್ ವರೆಗಿನ ಕ್ಯಾಲೆಂಡರ್ ಅನ್ನೇ ಯಾವುದೇ ಬದಲಾವಣೆ ಇಲ್ಲದಂತೆ ಬಳಸ್ತಿರುವಾಗ ಸ್ನೇಹಿತರ ಜೊತೆ ಸಂಬಂಧಿಕರ ಜೊತೆ ಶುಭಾಷಯ ವಿನಿಮಯ ಮಾಡಿಕೊಳ್ಳಿಕ್ಕೆ ಬಿಗುಮಾನ ಯಾಕೆ?? ಯುಗಾದಿಯನ್ನು ಇದಕ್ಕಿಂತ ಜೋರಾಗಿ ಆಚರಿಸಿದರಾಯ್ತು.. ಏನಂತೀರ..
ಎಲ್ಲರಿಗೂ ಹೊಸವರ್ಷ೨೦೧೬ ರ ಶುಭಾಷಯಗಳು...
Thursday, October 1, 2015
Friday, August 14, 2015
ಬೇಕು
ಇದು ಬೇಕುಗಳ ಲೋಕ
ಸಾಕು ಎಂಬುದಿಲ್ಲಿ ಮರೀಚಿಕೆ
ಮಗುವಿಗೆ ಹೆತ್ತವರ ಮಮತೆ ಸಾಕೆನಿಸುವುದೆ?
ಆಟಿಗೆಯು ಹೆಚ್ಚಿದೆ ಎಂದು ಎಂದಾದರೂ ಅನಿಸುವುದೆ...?
ತಾಯಿಗೆ ಮಕ್ಕಳು ಉಂಡಿದ್ದು ಹೆಚ್ಚೆನಿಸಲುಂಟೆ?
ಹಾಗೆಯೇ ಗಂಡನ ಪ್ರೀತಿಯು!
ಬೆಳೆ ಬೆಳೆವ ರೈತರಿಗೆ ಫಸಲು ಸಾಕೆನಿಸುವುದೇ?
ಕೊಳ್ಳೆ ಹೊಡೆವ ಚೋರನಿಗೂ ಇನ್ನು ಬೇಕೆಂದೆನಿಸದೇ?
ಮಲೆನಾಡ ವೃದ್ಧರಿಗೆ ಈಗಿನ ಮಳೆ ಹೆಚ್ಚೆಂದೆನಿಸುವುದೆ?
ಹಾಗೆಯೇ ಲೋಕದ ನೀತಿಯು...
ಜಗದೊಳಗೆ ತನಗಿರುವ ಸಂಪತ್ತು ಸಾಕೆನ್ನುವರುಂಟೆ?
ರಾಜಕಾರಿಣಿಯು ಸೀಟೆನಗೆ ಬೇಡವೆನ್ನುವನೇ?
ಮನದೊಡತಿ ಯೊಡನಿರಲು ಸಮಯ ಸಾಕೆನಿಸುವುದುಂಟೇ
ಇದೇ ಪ್ರೀತಿಯ ರೀತಿಯು...
Sunday, July 19, 2015
Friday, January 9, 2015
ಕುಡಿಕಥೆ- ಕೋಪ
ಅವಳು ಯಾವಾಗಲೂ ಹಾಗೆ... ಬೇಗ ಕೋಪಿಸಿಕೊಳ್ಳುತ್ತಾಳೆ.. ಅದೂ ಅಂತಿಂತ ಕೋಪವಲ್ಲ... ಭಯಂಕರ ಕೋಪ... ಅದಕ್ಕೇ ಅವಳ ಅಜ್ಜಿ ಹೇಳುತ್ತಿದ್ದುದು "ಅಪ್ಪನ ಸಿಟ್ಟೆಲ್ಲಾ ನಿನಗೇ ಬಂದಿದೆ" ಅಂತ... ಆ ಕೋಪಕ್ಕೆ ಅಂತಿಂತ ಕಾರಣವೇ ಇರಬೇಕೆಂದಿಲ್ಲ..." ನೀನು ಮಾಡಿದ್ದು ಸರಿಯಲ್ಲ" ಎಂದರೂ ಸಾಕು...
ಈಗ ಅವಳ ಕಷ್ಟ ಕೇಳುವವರು ಯಾರೂ ಇಲ್ಲ. ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ತವರಿನ ಬಾಂಧವ್ಯವೂ ಇಲ್ಲ. ತನಗಿಂತ ದುಪ್ಪಟ್ಟು ಕೋಪವಿರುವ ಮಗನನ್ನು ಬೆಳೆಸುವ ಜವಾಬ್ದಾರಿ ಬೇರೆ.
ಈಗ ಅವಳ ಕಷ್ಟ ಕೇಳುವವರು ಯಾರೂ ಇಲ್ಲ. ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ತವರಿನ ಬಾಂಧವ್ಯವೂ ಇಲ್ಲ. ತನಗಿಂತ ದುಪ್ಪಟ್ಟು ಕೋಪವಿರುವ ಮಗನನ್ನು ಬೆಳೆಸುವ ಜವಾಬ್ದಾರಿ ಬೇರೆ.
Monday, December 1, 2014
ಹರೆಯ
ಹೊರಟಿತ್ತು ಸವಾರಿ
೭೦ ರ ಹರೆಯದ
ದಂಪತಿಗಳು..
ಬದುಕನ್ನು ಸವರಿ
ಎಷ್ಟೆಷ್ಟೋ ಮರೆಯದ
ಸಂಗತಿಗಳು....
೭೦ ರ ಹರೆಯದ
ದಂಪತಿಗಳು..
ಬದುಕನ್ನು ಸವರಿ
ಎಷ್ಟೆಷ್ಟೋ ಮರೆಯದ
ಸಂಗತಿಗಳು....
ಹಿಂದೊಂದು ದಿನ
ಆತ ಕುಳಿತಿದ್ದ
ಅಂಗಳದಿ..
ಗುಲಾಬಿಯ ಮುಡಿದು
ಬಂದಳಾಗ ಆತನ
ಪ್ರಿಯ ಮಡದಿ....
ಆತ ಕುಳಿತಿದ್ದ
ಅಂಗಳದಿ..
ಗುಲಾಬಿಯ ಮುಡಿದು
ಬಂದಳಾಗ ಆತನ
ಪ್ರಿಯ ಮಡದಿ....
ಇಂದು ವಿಶೇಷಕೆ
ಏನ ಮಾಡಲಿ
ಸಿಹಿಯ..
ಎಂದು ಕೇಳಲು
ಹೇಳಿದನವಳ
ಇನಿಯ....
ಏನ ಮಾಡಲಿ
ಸಿಹಿಯ..
ಎಂದು ಕೇಳಲು
ಹೇಳಿದನವಳ
ಇನಿಯ....
ಇಂದಿಗೆ ಒಂದು
ವರುಷ
ನಮ್ಮ ಬಾಳಿಗೆ..
ನೀ ತಂದೆ
ಹರುಷ
ನನ್ನ ಪಾಲಿಗೆ....
ವರುಷ
ನಮ್ಮ ಬಾಳಿಗೆ..
ನೀ ತಂದೆ
ಹರುಷ
ನನ್ನ ಪಾಲಿಗೆ....
ನಿನಗೇನಿಷ್ಟ
ಅದೇ
ಆಗಲಿ..
ನಮ್ಮೀ ಬದುಕು
ನಗು ನಗುತ
ಸಾಗಲಿ....
ಅದೇ
ಆಗಲಿ..
ನಮ್ಮೀ ಬದುಕು
ನಗು ನಗುತ
ಸಾಗಲಿ....
ಅಂದು ಮಾಡಿದ್ದಳು
ಆ ಸತಿ ಅವನಿಷ್ಟದ
ಹೋಳಿಗೆ..
ಮೆಲಕು ಹಾಕುವರಿಂದು
೫೦ ರ ಬಾಂಧವ್ಯದ
ಬಾಳಿಗೆ....
ಆ ಸತಿ ಅವನಿಷ್ಟದ
ಹೋಳಿಗೆ..
ಮೆಲಕು ಹಾಕುವರಿಂದು
೫೦ ರ ಬಾಂಧವ್ಯದ
ಬಾಳಿಗೆ....
ಇಂದಿಗೂ ಅದೇ
ಒಪ್ಪಂದ
ಅವರ ದಾಂಪತ್ಯದಲಿ..
ಇಂದೂ ೫೦ರ
ಹೋಳಿಗೆಯ
ಊಟ ಸಂತ್ರಪ್ತದಲಿ....
ಒಪ್ಪಂದ
ಅವರ ದಾಂಪತ್ಯದಲಿ..
ಇಂದೂ ೫೦ರ
ಹೋಳಿಗೆಯ
ಊಟ ಸಂತ್ರಪ್ತದಲಿ....
Subscribe to:
Posts (Atom)







