Wednesday, September 22, 2010

ಮೊಗ್ಗಿನ ಮನಸುಗಳು..

ಹಾಯ್..


ಹಲೋ..



  ಏನ್ಮಾಡ್ತಾ ಇದೀಯಾ ?


 ಫೋಟೋ ನೋಡ್ತಿದ್ದೆ..


ಏನಾದ್ರು ಆಡೋಣ್ವಾ ?

ಸರಿ, ಎಲ್ಲಾರ್ನು ಕರಿತೀನಿ..   


 ಎಲ್ರೂ ಬನ್ನಿ ... ಆಡೋಣ ...

 ಯಾವ  ಆಟನೇ? 


ಜೂಟಾಟ ಆಡೋಣ್ವಾ ? 


 ಹಮ್.. ಸರಿ..


ಏಯ್, ಇಲ್ನೋಡ್ರೋ... ಏನೋ ಇದೆ ಇಲ್ಲಿ..


ಅಯ್.. ಎಷ್ಟ್ ಮಜ ಇದೆ ಅಲ್ವಾ?! ಎಷ್ಟೊಂದ್ ಕಾಲಿದೆ ಇದಕ್ಕೆ.. 



 ಅದರ ಮೇಲೆ ಹಾಕ್ಲಾ  ಇದನ್ನ? ..


ಬೇಡ.. ಅದಕ್ಕೆ ಚೊರಟೆ  ಅಂತಾರೆ.. ಅದು ಏನು ಮಾಡಲ್ಲ..
ನೋಡಿ ಈಗ ಚಕ್ಲಿ ಮಾಡ್ತೀನಿ ಅದನ್ನ..



 ಹಹಹಹ.. ಚೊರಟೆ ಚಕ್ಲಿ...



 ನನ್ಗೆ ಭಯ ಆಗ್ತಿದೆ , ಬಾರಣ್ಣ ಇಲ್ಲಿ...



 ಹೆದರಬೇಡ ... ಏನು ಮಾಡಲ್ಲ ಅದು..


ಏನಿದೆ ಅಲ್ಲಿ ನಾನು ನೋಡ್ಬೇಕು..


ಬರ್ತೀಯಾ?


ಬೇಡ.. ಅಮ್ಮ ಬೈತಾರೆ..


ನನಗೇ ಭಯ.. ಅವ್ನ್ ಬರ್ತಾನಂತೆ..


ನನ್ ಕರ್ಕೊಂಡ್ ಹೋಗಲ್ವಾ? ನಿಲ್ಲಿ ಮಾಡ್ಸ್ತೀನಿ..


 ಅಯ್ಯೋ... ಕಾಲಿಗೆನೋ ತಾಗಿದೆ...


ಕಾಲ್ ತೊಳ್ಕೋ ಬರ್ತೀನಿ...


ನಾವೆಲ್ಲಾ ಅಡ್ಕೊಳೋಣ.. ಅವ್ಳು ಹುಡ್ಕ್ಲಿ..


ಎಲ್ಲಾ ಎಲ್ಲಿಗ್ ಹೋದ್ರು ? 



ಅಡ್ಕೊಂಡಿದೀರಾ..?  ಹುಡ್ಕ್ತೀನಿ ತಾಳಿ...


ನಾನ್ ಇಲ್ಲಿದೀನಿ ಅಂತ ಹೇಳ್ಬೇಡ..



ಆಯ್ತು.. ನನ್ನು ಆಟಕ್ಕೆ ಸೇರ್ಸ್ಗೋಳಿ ...


ಎಲ್ಲೋ ಮಾತ್ ಕೇಳ್ತಿದೆ...


ಹಹಹ... ಸಿಕ್ಬಿದ್ದ..


ಪ್ಚ್ಕ್..  ಎಲ್ಲಾರ್ನು ಹುಡ್ಕು..


ನಾನಂತು ಸಿಗಲ್ಲ...


ಹಿಡ್ಕೊಡ್ಲಾ ?


ಹಾಗಿದ್ರೆ ನೀನ್ ಬೇಡ ಆಟಕ್ಕೆ...


ಹೆಹೆ... ನಾನೇ ಹುಡ್ಕ್ದೆ..  ಹೇಗೆ?


ಬಾರೋ... ಬೇರೆ ಆಟ ಆಡ್ತೀವಿ ಈಗ...


ಇಲ್ಲೇ ಇದ್ದಿದ್ಯಾ ನೀನು?


ಯಾಕೆ ಬೇರೆ ಆಟ? ನಾನ್ ಬರಲ್ಲ.. 
ಮನೆಗ್ ಹೋಗ್ತೀನಿ.....




 ಅಲ್ನೋಡೋ ಪಾಪುನಾ... 




 ಹೇಗಿದೆ ಗೆಟಪ್ಪು?



ಉಮ್ಮ್ಮ್ಮ್.... ಸಖತ್ ಮಿಂಚಿಂಗು... 



ಮತ್ತೀಗ ?


ಎಲ್ಲರಿಗೂ ಮನೇಲಿ ಕರೀತಿದಾರೆ ...
ನಡೀರಿ ಹೋಗೋಣ... ಟಾಟಾ..


ಟಾಟಾ... ನಾಳೆ ಮತ್ತೆ ಆಡೋಣ .... 

Wednesday, September 1, 2010

ಶ್ರೀ ಕೃಷ್ಣಾರ್ಪಣಮಸ್ತು....


ಅಂಬೆ ಕಾಲಿಕ್ಕುತ ಬಂದ
ಕೈಯ್ಯಲಿ ಕೊಳಲು ನೋಡಲು ಚೆಂದ
ಉಟ್ಟಿಹ ಪೀತಾಂಬರ ಅಂದವೋ ಅಂದ
ಇವನೇ ನಮ್ಮ ಬಾಲ ಮುಕುಂದ...
     
      ಶಿರದಲಿ ಶೋಭಿಪ ನವಿಲುಗರಿ
      ನೀಲ ವರ್ಣ ನಮ್ಮ ಮುರಾರಿ
      ಹಣೆಯಲಿ ತಿಲಕ ಕಾಲಲಿ ಗೆಜ್ಜೆ
      ಬರುವನು ಇಟ್ಟು ಪುಟ್ಟ ಹೆಜ್ಜೆ... 

ನವನೀತ ಚೋರ ಈ ಪುಟ್ಟ ಪೋರ
ಮಾಡುವ ಮೋಡಿಯ ತುಂಟ ಕುಮಾರ
ದೇವಕಿ ಯಶೋಧರ ಮುದ್ದಿನ ಕುವರ
ಬಾಲ ಲೀಲೆಯು ಇವನದತಿ ಮಧುರ...
     
      ಕೃಷ್ಣ ಗೋವಿಂದ  ಗೋಪಾಲನು ಇವನೆ
      ಭಕ್ತಿಲಿ ಬೇಡಲು ತೋರುವ ಕರುಣೆ...
      ಮಾಡುವ ಇವನ ದಿನವು ಸ್ಮರಣೆ
      ಪರಿಹರಿಸುವ ಇವ ನಮ್ಮಯ ಬವಣೆ...

ಹರೇಕೃಷ್ಣ  ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
       || ಶ್ರೀ ಕೃಷ್ಣಾರ್ಪಣಮಸ್ತು....||

Monday, August 16, 2010

ಜೈ ಭಾರತಾಂಬೆ....

ಭಾರತವು ನಮ್ಮ ದೇಶ  
ಚಿತ್ರಕೃಪೆ :  ಅಂತರ್ಜಾಲ
ಹೇಳುವೆವು ಅದರ ವಿಶೇಷ..                
       
       ಹಲವು ಧರ್ಮದ ಬೀಡು 
       ಹಲವು ಭಾಷೆಯ ನಾಡು
       ಹಲವು ವೇಷದ ಜನರು
       ಇರುವರಿಲ್ಲಿ ...


ಅಂದು ೧೫ರಂದು 
ಅಗಸ್ಟ್ ತಿಂಗಳಿನಂದು 
ಸಿಕ್ಕಿತಿದಕ್ ಸ್ವಾತಂತ್ರ್ಯ 
ಆಂಗ್ಲರಿಂದ...
        
       ದುಡಿದರನೇಕ ಜನರು 
       ಮಡಿದರನೇಕ ಜನರು
       ದೊರಕಿಸಲು ಸ್ವಾತಂತ್ರ್ಯ 
       ಭಾರತಕ್ಕೆ...


ಚಿಕ್ಕ ಮಕ್ಕಳ ಜೊತೆಗೆ
ನವ್ಯ ಪ್ರಜೆಗಳ ಜೊತೆಗೆ 
ಅರ್ಪಿಸುವ ಶೃದ್ಧಾಂಜಲಿ 
ಅವರಿಗೆಲ್ಲ...
      
       ರಾಷ್ಟ್ರಭಕ್ತಿ ಬೆಳೆಸುವ 
       ರಾಷ್ಟ್ರವನ್ನು ಉಳಿಸುವ
       ರಾಷ್ಟ್ರಪ್ರೇಮ ಮೆರೆಸುವ
       ವಿಶ್ವದಲ್ಲಿ...
 

Tuesday, August 3, 2010

ಪರಿಸರ ಉಳಿಸಿ...



ಗಾಳಿ, ನೀರು, ಭೂಮಿ ಇವೆಲ್ಲ ನಿಸರ್ಗ  ಕೊಟ್ಟ ವರ
                       ಮಾಲಿನ್ಯ ಮಾಡಬೇಡಿ....

Friday, July 30, 2010

ಕನಸು.....


ಮುಗ್ಧ ಮನದ 
ನಗ್ನ ಮಗುವೆ 
ಯೋಚಿಸುವೆ ಏನನು?
ಮುದ್ದು ಮುಖದ 
ಪುಟ್ಟ ತುಟಿಯಲಿ 
ನಗುವನೇಕೆ ಕಾಣೆನು? 
     ಕಣ್ಣಲಿಹುದು
     ನೂರು ಆಸೆ
     ಚಿಂತೆ ಏಕೆ ಮಾಡುವೆ?
     ನಾಳೆ ದಿನವು
     ನಿಂದೆ ಎಲ್ಲ
     ಖುಷಿಯ ನೀನು ಕಾಣುವೆ.
ಹಣೆಯಲಿಹುದು 
ಮೂರು ಬಣ್ಣ 
ಕೆಳಗೆ ಕಪ್ಪು ಚುಕ್ಕಿಯು.
ಮೈಯ ಮೇಲೆ
ಇರುವ ವರ್ಣ 
ಅದುವೆ ದೇಶಭಕ್ತಿಯು.
     ಕೆನ್ನೆಯಲ್ಲಿ
     ಬಣ್ಣವಿಹುದು
     ಇರಲಿ ನಗುವು ಅಲ್ಲಿಯೇ.
     ನಿನಗು ಕೂಡ
     ನಮಿಸಿ ಕೇಳ್ವೆ 
     ಇರಲಿ ದೇಶಪ್ರೇಮ ಹೀಗೆಯೆ.
(ತುಷಾರದಲ್ಲಿ ಪ್ರಕಟಿತ)