Friday, July 30, 2010

ಕನಸು.....


ಮುಗ್ಧ ಮನದ 
ನಗ್ನ ಮಗುವೆ 
ಯೋಚಿಸುವೆ ಏನನು?
ಮುದ್ದು ಮುಖದ 
ಪುಟ್ಟ ತುಟಿಯಲಿ 
ನಗುವನೇಕೆ ಕಾಣೆನು? 
     ಕಣ್ಣಲಿಹುದು
     ನೂರು ಆಸೆ
     ಚಿಂತೆ ಏಕೆ ಮಾಡುವೆ?
     ನಾಳೆ ದಿನವು
     ನಿಂದೆ ಎಲ್ಲ
     ಖುಷಿಯ ನೀನು ಕಾಣುವೆ.
ಹಣೆಯಲಿಹುದು 
ಮೂರು ಬಣ್ಣ 
ಕೆಳಗೆ ಕಪ್ಪು ಚುಕ್ಕಿಯು.
ಮೈಯ ಮೇಲೆ
ಇರುವ ವರ್ಣ 
ಅದುವೆ ದೇಶಭಕ್ತಿಯು.
     ಕೆನ್ನೆಯಲ್ಲಿ
     ಬಣ್ಣವಿಹುದು
     ಇರಲಿ ನಗುವು ಅಲ್ಲಿಯೇ.
     ನಿನಗು ಕೂಡ
     ನಮಿಸಿ ಕೇಳ್ವೆ 
     ಇರಲಿ ದೇಶಪ್ರೇಮ ಹೀಗೆಯೆ.
(ತುಷಾರದಲ್ಲಿ ಪ್ರಕಟಿತ)

25 comments:

  1. ಪ್ರಗತಿಯವರೆ,
    ಚಿತ್ರದಲ್ಲಿರುವ ಮಗುವಿನ ಭಾವನೆ,ಅದಕ್ಕೆ ಹುರುಪಿನಿ೦ದ ತಿಳಿಸಿಲ್ಪಟ್ಟ ಶಬ್ದಗಳು ಕವನದಲ್ಲಿ ಸು೦ದರವಾಗಿ ಮೂಡಿಬ೦ದಿದೆ..

    ReplyDelete
  2. ಸುಂದರ ಚಿತ್ರಕ್ಕೆ ಸೊಗಸಾದ ಕವನ!

    ReplyDelete
  3. ಚಂದದ ಚಿತ್ರಕ್ಕೆ ಅಂದದ ಕವನ..........
    ಕವನ ತುಂಬಾ ಇಷ್ಟವಾಯಿತು.

    ReplyDelete
  4. ಚ೦ದದ ಕವನ ... ತುಶಾರದಲ್ಲಿ ಪ್ರಕಟಿತಗೊ೦ದಿದ್ದಕ್ಕೆ ಅಭಿನ೦ದನೆಗಳು.

    ReplyDelete
  5. ಪ್ರತಿಕ್ರಿಯೆಗೆ ಧನ್ಯವಾದಗಳು ಮನಮುಕ್ತಾ ಮೇಡಂ... ಬರುತ್ತಿರಿ..

    ReplyDelete
  6. ವಂದನೆಗಳು ಮೂರ್ತಿ ಸರ್... ಪ್ರೋತ್ಸಾಹ ಇರಲಿ ..

    ReplyDelete
  7. ಕವನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಪ್ರವೀಣ್ ಸರ್..

    ReplyDelete
  8. ಧನ್ಯವಾದಗಳು ಚುಕ್ಕಿ ಚಿತ್ತಾರ ಅವರಿಗೆ... ಬರುತ್ತಿರಿ...

    ReplyDelete
  9. ಹಾರೈಕೆಗೆ ಧನ್ಯವಾದಗಳು ವಸಂತ್ ...

    ReplyDelete
  10. ಚಿತ್ರ, ಕವನ ತುಂಬಾ ಇಷ್ಟವಾಯಿತು.

    ReplyDelete
  11. kavanada chitra arthapoornavaagide.... tumbaa ishtavaaytu...

    ReplyDelete
  12. ಪ್ರಗತಿ...ವಾವ್...ಅದ್ಭುತ ಪದಗಳ ಚಿಕ್ಕ ಚೊಕ್ಕ ಸಾಲುಗಳು ಮಗುವಿನ ಮುಗ್ಧತೆ ಮತ್ತು ಕನಸುಗಳಂತೆ..ನಿರ್ಮಲ...

    ReplyDelete
  13. ಶಿಶು ಗೀತೆ ಚೆನ್ನಾಗಿ ಮೂಡಿ ಬಂದಿದೆ, ಧನ್ಯವಾದಗಳು

    ReplyDelete
  14. ತುಂಬಾ ಚನ್ನಾಗಿದೆ ನಿಮ್ಮ ಈ ಕವನ ಬಿಡುವು ಮಾಡಿಕೊಂಡು ಒಮ್ಮೆ ಬನ್ನಿ ನನ್ನವಳಲೋಕಕ್ಕೆ
    SATISH N GOWDA
    http://nannavalaloka.blogspot.com/

    ReplyDelete
  15. ಧನ್ಯವಾದಗಳು ವನಿತಾ ಅವರಿಗೆ... ಆಗಾಗ ಬರುತ್ತಿರಿ...

    ReplyDelete
  16. ದಿನಕರ್ ಸರ್, ತುಂಬಾ ತುಂಬಾ ಧನ್ಯವಾದಗಳು.. ಹೀಗೆ ಕಂಮೆಂಟಿಸುತ್ತಿರಿ...

    ReplyDelete
  17. ವಂದನೆಗಳು ಅಜಾದ್ ಸರ್... ನಿಮ್ಮ ಪ್ರತಿಕ್ರಿಯೆಗೆ... ಪ್ರೋತ್ಸಾಹ ಹೀಗೆ ಇರಲಿ...

    ReplyDelete
  18. ಧನ್ಯವಾದಗಳು ಸತೀಶ್ ಅವರಿಗೆ... ಆಗಾಗ ಬರುತ್ತಿರಿ...

    ReplyDelete
  19. ಸುಂದರ ಕವನ..
    ವಂದೇಮಾತರಂ !!

    ReplyDelete
  20. ಕತ್ತಲೆ ಮನೆ... ಧನ್ಯವಾದಗಳು...

    ReplyDelete
  21. hadikondu kuniva dhaatiya shishugete chennagide. aadare mugda maguvanna banna baledu chitra tegedu pracharakke balasiddu yaako besaravaayitu.
    chendada kavana. baalyada erutihudu haarutihudu nodu namma bhaavuta nenapaayitu.

    ReplyDelete
  22. ಮುದ್ದು ಮೊಗದ ಕ೦ದನಿಗೊ೦ದು ಅ೦ದದ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.

    ReplyDelete
  23. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸೀತಾರಾಮ್ ಸರ್... ಮಗುವಿನ ತುಂಟಾಟಕ್ಕೆ ಬಣ್ಣದ ಲೇಪನ... ಚಿತ್ರಕೃಪೆ ತುಷಾರದ್ದು ಸರ್... ಕವನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

    ReplyDelete
  24. ಪ್ರಭಾಮಣಿ ಅವರಿಗೆ ಚಿತ್ತಾರಕ್ಕೆ ಸ್ವಾಗತ... ಆಗಾಗ ಬರುತ್ತಿರಿ...

    ReplyDelete