ಕೊಟ್ಟು ಕೆಟ್ಟವರುಂಟು
ಬಿಟ್ಟು ಸತ್ತವರುಂಟು
ಧರಣಿ ಇರುವುದೀಗ ಧನದ ಮೇಲೆ...
ಕೊಡದೆ ಕಳೆದವರುಂಟು
ಬಿಡದೆ ಮಡಿದವರುಂಟು
ಮನುಜ ಇರುವುದೀಗ ಹಣದ ಮೇಲೆ...
ಆ ಕಾಲ ಒಂದಿತ್ತು
ಮನೆಯೆಲ್ಲ ತುಂಬಿತ್ತು
ಭಯ ಭಕ್ತಿ ಇದ್ದಿತ್ತು ಸರ್ವರಲ್ಲಿ...
ಸಹಬಾಳ್ವೆ ಅಲ್ಲಿತ್ತು
ಪ್ರೀತಿಯ ಹಸಿವಿತ್ತು
ಗೌರವದ ನಯವಿತ್ತು ವೃದ್ಧರಲ್ಲಿ...
ಈಗಿಲ್ಲ ಆ ಸತ್ವ
ಮರೆತರು ಮನುಷ್ಯತ್ವ
ವೃದ್ಧರಾ ಪಾಡು ಕೇಳ್ವರಿಲ್ಲ...
ಕೊಟ್ಟುಬಿಟ್ಟರು ಆಸ್ತಿ
ಅದಕ್ಕಾಗಿಯೇ ಈಸ್ಥಿತಿ
ಸಿಕ್ಕಮೇಲ್ ಅವರ ಚಿಂತೆಯಿಲ್ಲ...
ಪ್ರಗತಿ ..
ReplyDeleteನಿಜ ಇತ್ತೀಚಿನ ದಿನದಲ್ಲಿ ಎಲ್ಲವೂ ಹಣಕ್ಕಾಗಿ ಅನ್ನುವ ಸಂದರ್ಭ ಉಂಟಾಗಿದೆ ..
ಸಹ ಬಾಳ್ವೆ .. ಸಹ ಜೀವನ ಎಲ್ಲ ಹಳೆ ನೆನಪುಗಳಷ್ಟೆ ..
ಸುಂದರ ಕವನ ...
ಪ್ರಗತಿ;ಚೆಂದದ ಕವನ.
ReplyDeleteಅರ್ಥವತ್ತಾದ ಕವನ.... ವಾಸ್ತವಿಕತೆಯನ್ನು ಎತ್ತಿ ಹಿಡಿಯುತ್ತಿದೆ... ಚೆನ್ನಾಗಿದೆ.
ReplyDeleteಹೌದು ಶ್ರಿಧರಣ್ಣ, ಕುಟುಂಬಗಳಲ್ಲಿ ಮೊದಲಿದ್ದ ಬಾಂಧವ್ಯ ಕಡಿಮೆ ಆಗ್ತಾಇದೆ. ಅವಿಭಕ್ತ ಕುಟುಂಬಗಳು ಕಣ್ಮರೆ ಆಗ್ತಿವೆ... ಮುಂದಿನ ಪೀಳಿಗೆಗೆ ತುಂಬಿದ ಮನೆಯ ಚೆಂದದ ಹೊಂದಾಣಿಕೆಯ ಚಿತ್ರಣ ಮರೀಚಿಕೆಯೇ ಆಗಿದೆ...
ReplyDeleteಧನ್ಯವಾದಗಳು ಮೂರ್ತಿ ಸರ್, ನಮಸ್ಕಾರ.. ಬರುತ್ತಿರಿ..
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು ತೇಜಸ್ವಿನಿ ಮೇಡಂ,
ReplyDeleteಜನರಲ್ಲಿ ಪ್ರೀತಿ ಪ್ರೇಮ ವಾತ್ಸಲ್ಯಕ್ಕಿಂತ ಸಂಪತ್ತೇ ಹೆಚ್ಚಿನ ಮಹತ್ವ ಪಡೆಯುತ್ತಿದೆ.. ಮನೆಗಳಲ್ಲಿ ಮೊದಲಿದ್ದ ಸಂಸ್ಕಾರ ಕಡಿಮೆ ಆಗ್ತಿದೆ..
ನಮಸ್ಕಾರ.. ಬರುತ್ತಿರಿ..
ಚೆನ್ನಾಗಿದೆ,ಪ್ರಗತಿಯ ಹಾದಿಯಲ್ಲಿ ನಿಮ್ಮ ಬರವಣಿಗೆ ಸಾಗಲಿ, ಶುಭಹಾರೈಕೆಗಳು ಮತ್ತು ಧನ್ಯವಾದ
ReplyDeleteಶುಭ ಹಾರೈಕೆಗೆ ಧನ್ಯವಾದಗಳು ಭಟ್ ಸರ್...
ReplyDeleteವಾಸ್ತವಿಕತೆಯನ್ನು ಮನಮುಟ್ಟುವ೦ತೆ ಕವನಿಸಿದ್ದೀರಿ..ಚೆನ್ನಾಗಿ ಬರೆದಿದ್ದೀರಿ.
ReplyDeleteಅವಿಭಕ್ತ ಕುಟುಂಬಗಳು ಕಣ್ಮರೆ ಆಗ್ತಿವೆ,ಸಹ ಬಾಳ್ವೆನೆನಪುಗಳಷ್ಟೆಚೆನ್ನಾಗಿ ಬರೆದಿದ್ದೀರಿ.
ReplyDeleteನೂರಕ್ಕೆ ನೂರರಷ್ಟು ಸತ್ಯ ನಿಮ್ಮ ಮಾತು,
ReplyDeleteಹಣವಂತನಿಗೆ ಮೊದಲ ಆಧ್ಯತೆ ಈಗ ನಮ್ಮಲ್ಲಿ, ನಮ್ಮಂತವರನ್ನು ಕೇಳುವವರೇ ಇಲ್ಲ!
ಕವನ ತುಂಬಾ ಇಷ್ಟ ಆಯ್ತು........
ಹೌದು ಪ್ರಗತಿ ಮೇಡಮ್,,ನೀವಂದಿದ್ದು ಸತ್ಯ..
ReplyDeleteತಂದೆ ತಾಯಿ, ಹಿರಿಯರು ಕೊಟ್ಟ ಪ್ರೀತಿ, ವಾತ್ಸಲ್ಯ, ಅದಕ್ಕಾಗಿ ಅವರು ಪಟ್ಟ ಕಷ್ಟ ಎಲ್ಲವನ್ನು ಮರೆತು, ತಮ್ಮ ಸಂತೋಷದ ಸೌಧವನ್ನು ಹಿರಿಯರ ಕುಸಿದ ಕನಸಿನ ಗೋಪುರ, ಆಶೋತ್ತರಗಳ ಸಮಾಧಿಯ ಮೇಲೆ ಕಟ್ಟಿಕೊಳ್ಳುವವರೇ ಜಾಸ್ತಿಯಾಗಿದ್ದಾರೆ..
ಇತರರ ಭಾವನೆ, ಅನಿಸಿಕೆಗಳಿಗೆ ಬೆಲೆ ಕಮ್ಮಿಯಾಗುತ್ತಿದೆ..ಬರೀ ದುಡ್ಡು, ಸ್ವಾರ್ಥ ಇವಿಷ್ಟೇ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ..
ತುಂಬಾ ಚೆನ್ನಾಗಿದೆ ನಿಮ್ಮ ಬರಹ..ಹೀಗೆಯೇ ತಮ್ಮ ಬರವಣಿಗೆ ಮುಂದುವರೆಯಲಿ..
pragati madam,
ReplyDeletesundara arthagarbhita kavana..... eega dharaNiya mele dhanakke bele.... uLidavellaa hore....
ಪ್ರಗತಿಯವರೆ ನಿಮ್ಮ ಕವನ ಓದಿದಾಗ ಅವಿಭಕ್ತ ಕುಟುಂಬದ ನೆನಪಾಯಿತು... ಈಗಿನ ಕಾಲದ ಮಕ್ಕಳಿಗೆ ಅಪ್ಪ ಅಮ್ಮ ಎರಡನ್ನು ಬಿಟ್ಟರೆ ಬೇರೆ ಸಂಬಂಧಗಳು ಗೊತ್ತೇಇಲ್ಲ :(
ReplyDeleteಮೊದಲೆರಡು ಪ್ಯಾರಾಗಳು ತುಂಬಾ ಇಷ್ಟವಾದವು
ಧನ್ಯವಾದಗಳು ಮನಮುಕ್ತಾ ಮೇಡಂ..
ReplyDeleteಕುಸು ಅವರೇ...
ReplyDeleteಈಗಿನ ದಿನಮಾನದಲ್ಲಿ ಜೀವನ ನಿರ್ವಹಿಸಲು ವಿಭಕ್ತ ಕುಟುಂಬ ಪದ್ದತಿಗೆ ಅಂಟಿಕೊಂಡಿದ್ದೇವೆ. ಮುಂದಿನ ಪೀಳಿಗೆಗೆ ಇದರಿಂದ ಭಯಂಕರ ನಷ್ಟ (ಪ್ರೀತಿಯ)ವಿದೆ ಎಂದು ನನ್ನ ಅನಿಸಿಕೆ... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಕವನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಪ್ರವೀಣ್ ಸರ್, ಬರುತ್ತಿರಿ..
ReplyDeleteಪ್ರಗತಿ...
ReplyDeleteತುಂಬಾ ಸತ್ಯವಾದ ಮಾತುಗಳನ್ನು..
ತುಂಬಾ ಸೊಗಸಾಗಿ ಹೇಳಿದ್ದೀರಿ..
ಹಣವೆಂದರೆ ಹೆಣ ಬಾಯಿತೆರೆದಿತ್ತಂತೆ.. !
ಅಭಿನಂದನೆಗಳು..
ಚಂದದ ಕವಿತೆಗೆ...
ಕೊಟ್ಟು ಕೆಟ್ಟವರುಂಟು
ReplyDeleteಬಿಟ್ಟು ಸತ್ತವರುಂಟು
ಧರಣಿ ಇರುವುದೀಗ ಧನದ ಮೇಲೆ...
ಕೊಡದೆ ಕಳೆದವರುಂಟು
ಬಿಡದೆ ಮಡಿದವರುಂಟು
ಮನುಜ ಇರುವುದೀಗ ಹಣದ ಮೇಲೆ...
ಬಹಳ ಪ್ರಭಾವಯುತ ಮತ್ತು ಅಳೆದು ತೂಗಿ ಬಳಸಿದ ಪದಗಳು...ತುಂಬಾ..ತುಂಬಾ ಇಷ್ಟವಾದ ಸಾಲುಗಳು..ಪ್ರಗತಿ...ಪ್ರಗತಿ ದಿನ ದ್ವಗುಣ ನಿಶ ನೂರ್ಗುಣ ವಾಗಲಿ....
tumba chennagide kavana.............vaastava heege irodu.... heege munduvariyali nimma baravaNige
ReplyDeleteಚೆನ್ನಾಗಿದೆ ಕವನ ಅಲ್ಲಲ್ಲಾ ವಾಸ್ತವದ ಕೈಗನ್ನಡಿ!
ReplyDeleteಇನ್ನು ಹೊರ ಬರಲಿ.
ಚಿತ್ರ ಬಿಡಿಸಿದ್ದು ನೀವೇನ?
ಧನ್ಯವಾದಗಳು ಚೇತನಾ ಮೇಡಂ.. ನಿಮ್ಮ ಮಾತು 100 ಕ್ಕೆ 100 ಸತ್ಯ.. ತಮ್ಮನ್ನ ಬೆಳೆಸಲಿಕ್ಕೆ ಅವ್ರು ಎಸ್ಟ್ ಕಷ್ಟ ಪಟ್ಟಿರ್ತಾರೆ ಅನ್ನೋದೇ ಮರ್ತುಬಿಟ್ಟಿರ್ತ್ತಾರೆ .. ವಯಸ್ಸಾಗಿರೋ ಕಾಲದಲ್ಲಿ ಅವ್ರಿಗೆ ಎರಡ್ ಹೊತ್ತು ಊಟ ಹಾಕೋಕೂ ಇವರಿಗೆ ಕಷ್ಟ...
ReplyDeleteಬರುತ್ತಿರಿ.. ನಮಸ್ಕಾರ..
ಪ್ರತಿಕ್ರಿಯೆಗೆ ಧನ್ಯವಾದಗಳು ದಿನಕರ್ ಸರ್, ಜವಾಬ್ದಾರಿ ಬಂದಾಗ ನುಣುಚಿಕೊಳ್ಲೋರೆ ಜಾಸ್ತಿ... ಅಲ್ವೇ?
ReplyDeleteಗುರು ಪ್ರಸಾದ್ ಅವರೇ,
ReplyDeleteಚಿತ್ತಾರಕ್ಕೆ ಸ್ವಾಗತ, ಈಗಿನ ಪಟ್ಟಣ ಪ್ರದೇಶಗಳಲ್ಲಿ ಮಕ್ಕಳಿಗೆ ಅವಿಭಕ್ತ ಕುಟುಂಬದ ಕಲ್ಪನೆಯೇ ಇರಲಿಕ್ಕಿಲ್ಲ.. ಅಜ್ಜ ಅಜ್ಜಿ ಸಿಟಿಗೆ ಬರಲ್ಲ, ಇವರಿಗೆ ಹಳ್ಳಿ ಬೇಡ.. ಒಟ್ನಲ್ಲಿ ಕುಟುಂಬಗಳು ಛಿದ್ರಆಗುತ್ತಿವೆ..
ಕವನನ ಇಷ್ಟ ಪಟ್ಟಿದ್ದಕ್ಕೆ ವಂದನೆಗಳು...
ಕಾಮೆಂಟಿಸಿದ್ದಕ್ಕೆ ಧನ್ಯವಾದ ಪ್ರಕಾಶಣ್ಣ, ಮೊನ್ನೆ tv ಲಿ ತೋರ್ಸ್ತಿದ್ರು... ಅಸ್ತಿಗೋಸ್ಕರ ಅಪ್ಪ ಅಮ್ಮನ್ನೇ ಕೊಂದನಂತೆ... ಎಷ್ಟ್ ಅಮಾನುಷ ಅನ್ಸ್ತು..
ReplyDeleteಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಜಲಾನಯನ ಅವರಿಗೆ,
ReplyDeleteಆದರೆ ದಿನ ದ್ವಗುಣ ನಿಶ(ರಾತ್ರಿ)ನೂರ್ಗುಣದ ಅರ್ಥ ಏನು? ದಯವಿಟ್ಟು ವಿವರಿಸಿ..
ಮನಸು ಮೇಡಂ, ಬ್ಲಾಗಗೆ ಸ್ವಾಗತ ... ಆಗಾಗ ಬರುತ್ತಿರಿ.. ಧನ್ಯವಾದಗಳು..
ReplyDeleteಧನ್ಯವಾದಗಳು ಸೀತಾರಾಮ್ ಸರ್, ಚಿತ್ರ ಹಿಂದೊಮ್ಮೆ ನಾನೇ ಬಿಡಿಸಿದ್ದು... ಈಗ ಉಪಯೋಗಕ್ಕೆ ಬಂತು.. ಪ್ರೋತ್ಸಾಹ ಹೀಗೆ ಇರಲಿ.. ನಮಸ್ಕಾರ...
ReplyDeleteಆ ಕಾಲ ಒಂದಿತ್ತು
ReplyDeleteಮನೆಯೆಲ್ಲ ತುಂಬಿತ್ತು
ತು೦ಬಾ ಇಷ್ಟ ಆಯ್ತು ಸಾಲುಗಳು.. ಪ್ರಗತಿ ಅವರೆ.
ಈ ಕಾಲ ಒ೦ದಿದೆ
ಮನೆಯಲ್ಲಿ ಎಲ್ಲ ಇದೆ..
ಮನವೆಲ್ಲ ಬರಿದೆ..
ಶುಭಾಶಯಗಳು
ಅನ೦ತ್
ಕವನದ ಸಾಲುಗಳನ್ನು ಇಷ್ಟಪಟ್ಟಿದ್ದಕ್ಕೆ ವಂದನೆಗಳು ಅನಂತ್ ಸರ್, ಮನೆಯಂತೆ ಮನವು ಬರಿದಾಗುತ್ತಿರುವುದು ವಿಷಾದವೇ ಸರಿ... ಆಗಾಗ ಬರುತ್ತಿರಿ...
ReplyDelete