ಮುಗ್ಧ ಮನದ
ನಗ್ನ ಮಗುವೆ
ಯೋಚಿಸುವೆ ಏನನು?
ಮುದ್ದು ಮುಖದ
ಪುಟ್ಟ ತುಟಿಯಲಿ
ನಗುವನೇಕೆ ಕಾಣೆನು?
ಕಣ್ಣಲಿಹುದು
ನೂರು ಆಸೆ
ಚಿಂತೆ ಏಕೆ ಮಾಡುವೆ?
ನಾಳೆ ದಿನವು
ನಿಂದೆ ಎಲ್ಲ
ಖುಷಿಯ ನೀನು ಕಾಣುವೆ.
ಹಣೆಯಲಿಹುದು
ಮೂರು ಬಣ್ಣ
ಕೆಳಗೆ ಕಪ್ಪು ಚುಕ್ಕಿಯು.
ಮೈಯ ಮೇಲೆ
ಇರುವ ವರ್ಣ
ಅದುವೆ ದೇಶಭಕ್ತಿಯು.
ಕೆನ್ನೆಯಲ್ಲಿ
ಬಣ್ಣವಿಹುದು
ಇರಲಿ ನಗುವು ಅಲ್ಲಿಯೇ.
ನಿನಗು ಕೂಡ
ನಮಿಸಿ ಕೇಳ್ವೆ
ಇರಲಿ ದೇಶಪ್ರೇಮ ಹೀಗೆಯೆ.
(ತುಷಾರದಲ್ಲಿ ಪ್ರಕಟಿತ)