Thursday, July 22, 2010

ಮಲ್ಲಿಗೆ...


ಹಸಿರು ಗಿಡದ ಬಿಳಿಯ ಮಲ್ಲಿಗೆ
ಅವಿತು ಕುಳಿತಿರುವೆ ಏತಕೆ? 
ಯಾರಾದರೂ ಕೊಯ್ಯುವರೆಂಬ ಭಯವೇ?
ಅಥವಾ ಕೊರೆಯುವ ಚಳಿಯೇ?
     ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ 
     ನಿನ್ನೊಳೆಷ್ಟು ವಿಧ...
     ಅವುಗಳ ಪರಿಮಳದಲ್ಲೂ 
     ಎಷ್ಟೊಂದು ಭೇದ..
ಮಲ್ಲಿಗೆ ಬಳ್ಳಿ ಮನೆಗೆ ಶೋಭೆ 
ಮಲ್ಲಿಗೆ ಜಡೆ ನಾರೀಮಣಿಗೆ ಶೋಭೆ 
ನಡುಗದಿರು ಗುಡುಗದಿರು ವ್ಯರ್ಥವಾಗುವೆನೆಂದು
ಮುಡಿಯುವರು ನಲಿಯುವರು ಹೆಂಗಳೆಯರು ಇಂದು..
    ನೀನಾಗುವೆ ದೇವರಿಗೆ ಅಲಂಕಾರ 
    ಮಧುಮಗಳಿಗೆ ನಿನ್ನಿಂದಲೇ ಶೃಂಗಾರ 
    ಆದರೂ ನಿನಗಿಲ್ಲ ಅಹಂಕಾರ 
    ಅದಕ್ಕೇ ನೀನು ಮಂಗಳಕರ...

16 comments:

  1. ಕವಿತೆಚೆನ್ನಾಗಿದೆ.ಮಲ್ಲಿಗೆಯ ಬಗ್ಗೆ ಕೆ.ಎಸ್.ನರಸಿಂಹ ಸ್ವಾಮಿಯವರು ಬರೆದ'ಉಮಾ'ಎಂಬ ಕವಿತೆಯ ಸಾಲೊಂದು ಹೀಗಿದೆ;'ಮುಡಿದ ಮಲ್ಲಿಗೆಯೊಂದೆ,ನೊಂದಂತೆ,ಮೆಲ್ಲಗೆ 'ನಿನ್ನಿಷ್ಟವೆಂದು' ಬೆಳ್ಳಗೆ ನಕ್ಕು ವಿರಮಿಸಿತು'.

    ReplyDelete
  2. ವಾವ್ ! ಎಂತಹ ಸಾಲು..
    ಕೆ.ಎಸ್.ಏನ್ ಅವರ ಸುಂದರ ಗೀತೆಯ ಸಾಲಿನೊಡನೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  3. ಮಲ್ಲಿಗೆಯನ್ನು ಕಂಡು ಮನಸೋಲದ ಹೆಂಗಸರಲ್ಲ ಗಂಡಸರೂ ಇಲ್ಲ ಎನ್ನಬಹುದು, ಕವಿಯೊಬ್ಬನ ಭಾವಗೀತೆ ಸುಶ್ರಾವ್ಯಕಂಠದ ಸಂಗೀತ ಹಾದುವವರಿಂದ ಹಾಡಲ್ಪಡುವ ವೇಳೆ ಅಲ್ಲಿ ನವಿಲ ನರ್ತನ, ಕೋಗಿಲೆಯ ಇನಿದನಿ ಮೇಳೈಸಿದರೆ, ಅಲಂಕಾರಕ್ಕೊಂದು ದೀಪಗಳ ಕಂಬ ಮತ್ತು ಪರಿಮಳಕ್ಕಾಗಿ ಮಲ್ಲಿಗೆ ಇದ್ದರೆ ಆ ಶೃಂಗಾರವೇ ಬೇರೆ ! ಅದು ಮಲ್ಲಿಗೆಯ ವೈಶಿಷ್ಟ್ಯ, ಮಲ್ಲಿಗೆಯ ಕವನ ಬಂದಾಗ ಸಹಜವಾಗಿ ನರಸಿಂಹ ಸ್ವಾಮಿಗಳ ನೆನಪು ಬಂದೇ ಬರುತ್ತದೆ. ಅವರ ಬಗ್ಗೆ ಮುಂದಿನವಾರ ಬರೆಯುತ್ತೇನೆ, ಕವನ ಚೆನ್ನಾಗಿದೆ, ನಮಸ್ಕಾರ

    ReplyDelete
  4. ಚುಕ್ಕಿ ಚಿತ್ತಾರ ಅವರಿಗೆ ಧನ್ಯವಾದಗಳು... ಪ್ರೋತ್ಸಾಹ ಹೀಗೆ ಇರಲಿ...

    ReplyDelete
  5. ವಂದನೆಗಳು ಭಟ್ ಸರ್..
    ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ನಿಮ್ಮ ಬರವಣಿಗೆಯ ಶೈಲಿ ತುಂಬಾ ಇಷ್ಟವಾಗತ್ತೆ..
    ಬರುತ್ತಿರಿ...

    ReplyDelete
  6. ಚಿತ್ರ, ಚಿತ್ರಣ ಎರಡನ್ನೂ ಚೆನ್ನಾಗಿ ರೂಡಿಸಿಕೊ೦ಡಿದ್ದೀರಿ ಪ್ರಗತಿ.
    ಉತ್ತಮ ಕವನ ಮತು ಚಿತ್ರ ಕೂಡ.

    ಶುಭಾಶಯಗಳು
    ಅನ೦ತ್

    ReplyDelete
  7. ಚೆ೦ದದ ಕವನ...ಸು೦ದರ ಸಾಲುಗಳು..

    ReplyDelete
  8. ಕಮೆಂಟಿಸಿದ್ದಕ್ಕೆ ಧನ್ಯವಾದಗಳು ಅನಂತ್ ಸರ್... ಬರುತ್ತಿರಿ..ನಮಸ್ಕಾರ ..

    ReplyDelete
  9. ಪ್ರತಿಕ್ರಿಯೆಗೆ ಧನ್ಯವಾದಗಳು ಮನಮುಕ್ತಾ ಮೇಡಂ...

    ReplyDelete
  10. ನಿಮ್ಮ ಎಲ್ಲಾ ಕವನಗಳೂ ಸುಂದರವಾಗಿವೆ,

    ಮಲ್ಲಿಗೆ ಪರಿಮಳಕೆ ಸಾಟಿಯುಂಟೆ..........
    ಚಂದದ ಕವನ.....

    ReplyDelete
  11. ಧನ್ಯವಾದಗಳು ಪ್ರವೀಣ್ ಸರ್... ಆಗಾಗ ಬರುತ್ತಿರಿ...

    ReplyDelete
  12. ಪ್ರಗತಿ,
    ಕವನ ಚೆನ್ನಾಗಿದ್ದು ,,, ಬರಲಿ ಇನ್ನಷ್ಟು ಕವನಗಳು.

    ReplyDelete
  13. dabba tara ede ee saalu

    ReplyDelete