Wednesday, October 6, 2010

ಯಾರು???


ಎಲ್ಲಾ ವಿಸ್ಮಯವು, ಸೋಜಿಗವು ಈ ಜಗದ ಒಳಗೆ...

ಮೂಡುವ ಸೂರ್ಯಗೆ ಬಣ್ಣವ ಬಳಿದವರಾರು?
ಹಾರುವ ಹಕ್ಕಿಗೆ ಹಾಡುವುದ ಕಲಿಸಿದವರಾರು?
ಮರದಲಿರುವ ಹಣ್ಣಿಗೆ ಸಿಹಿಯ ತುಂಬಿದವರಾರು?
ಹರಿವ ನೀರಿಗೆ ಕಲರವದ ದನಿ ಕೊಟ್ಟವರಾರು?

ಚೆಂದದ ಹೂವಿಗೆ ಸುವಾಸನೆಯ ನೀಡಿದವರಾರು?
ಹುಣ್ಣಿಮೆಯಲಿ ಆಗಸಕೆ ಚಂದಿರನ ಕಳಿಸಿದವರಾರು?
ಮೀನಿಗೆ ನೀರಿನಲಿ ಈಜುವುದ ಹೇಳಿಕೊಟ್ಟವರಾರು?
ದುಂಬಿಗೆ ಹೂವ ತೋರಿಸಿ ಕೊಟ್ಟವರಾರು?

ನೀಲಾಕಾಶದಿ ಮೋಡಗಳ ನಿಲ್ಲಿಸಿ ಬಂದವರಾರು?
ಪುಟ್ಟ ಕರುವಿಗೆ 'ಅಂಬಾ' ಎನ್ನುವುದ ಹೇಳಿಕೊಟ್ಟವರಾರು?
ಗಿಡದ ಮೊಗ್ಗನ್ನು ಬಂದು ಅರಳಿಸಿ ಹೋದವರಾರು?
ಬಣ್ಣದ ಚಿಟ್ಟೆಗೆ ಹಾರುವುದ ಕಲಿಸಿದವರಾರು?

ತೆಂಗಿನ ಕಾಯಲಿ ನೀರನು ತುಂಬಿ ಇಟ್ಟವರಾರು?
ಕೋಗಿಲೆಗೆ ಸುಂದರ ಧ್ವನಿಯ ನೀಡಿದವರಾರು?
ಮರಗಳಿಗೆ ಹಸಿರು ಎಲೆಯ ಜೋಡಿಸಿದವರಾರು?
ನನಗೆ ಇದಕ್ಕೆಲ್ಲ ಉತ್ತರವ ತಿಳಿಸುವವರಾರು?
35 comments:

 1. chenagide madam.. ellavu ವಿಸ್ಮಯ... navu yaru, nimge tilisuvareru... ellavu ವಿಸ್ಮಯ... :)

  ReplyDelete
 2. ಕೆಲವೊಂದು ಪ್ರಶ್ನೆಯುಂಟು
  ಲೋಕದಲ್ಲಿ ಗೊತ್ತಿದ್ದರೂ ಉತ್ತರಿಸಲಾಗದು ಅದಕೆ.
  ಮನದ ಭಾವಕೆ ಉತ್ತರ ಗೊತ್ತು
  ಆದರೆ ಹೇಳಲಾಗದಲ್ಲ ಏಕೆ?


  ಕೆಲವರ ಕೇಳಿದೆ ಅವರೆಂದರು
  ಇವೆಲ್ಲ ಆತನದೇ ಸ್ರಷ್ಟಿ
  ಹಲವರೆನ್ದರು ಇವಲ್ಲ ನೈಸರ್ಗಿಕ.
  ಸುಳ್ಳು ಎಲ್ಲ ಷಷ್ಠಿ , ಸಂಕಷ್ಟಿ

  ಸೂರ್ಯನ ಬಣ್ಣ ,ಹಕ್ಕಿಯ ಹಾಡು
  ಸಿಹಿ ಹಣ್ಣು ,ಝರಿ ನೀರು ಎಲ್ಲವೂ ನಮ್ಮದೇ ನವಭಾವಗಳು
  ಎಂಬುದು ನನ್ನ ಉತ್ತರ
  ಕೇಳಿ ಆ ಕಡೆ ಇ ಕಡೆ
  ಸಿಗಲಾರದೇನೋ ಸರಿಯಾದುದು
  ಒಬ್ಬರದು ದಕ್ಷಿಣ ,ಇನ್ನೊಬ್ಬರದು ಉತ್ತರ !!!!!!

  ReplyDelete
 3. "ಯಾರೋ ಯಾರೋ ಯಾರೋ
  ಕೊನೆಗೆ ಉಳಿಯೋರು ಯಾರು
  ಜೊತೆ ನಡೆಯೋರು ಯಾರು" ಈ ಹಾಡು ನೆನಪಾಯ್ತು ನನಗೆ ನಿಮ್ಮ ಕವನ ಓದಿ ಇದು "ಇಂತಿ ನಿನ್ನ ಪ್ರೀತಿಯ" ಚಿತ್ರದ್ದು
  ಕವನ ಸೊಗಸಾಗಿ ಬಂದಿದ್ದೆ ಆದ್ರೆ ನಿಮಗೆ ಅವರೆಲ್ಲ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕೊಡೋರು ಯಾರೋ ಅನ್ನೋ ಕಾತುರ ನನಗು ಇದೇ
  ಯಾರಿಗೂ ಸಿಗದ ಉತ್ತರ ನಿಂಗೆ ಸಿಗಲಿ
  ಶುಭವಾಗಲಿ

  ReplyDelete
 4. ವಿಸ್ಮಯಗಳಿಂದ ತುಂಬಿದ ಈ ಪ್ರಪಂಚದಲ್ಲಿ ಈ ಪ್ರಶ್ನೆಗಳು ಯಾವಾಗಲೂ ಇದ್ದೇ ಇದೆ !
  ಇಷ್ಟವಾಯ್ತು ನಿಮ್ಮ ಕವನ..ಚೆನ್ನಾಗಿ ಮೂಡಿಬರ್ತಾ ಇದೆ ಬ್ಲಾಗ್

  ReplyDelete
 5. ಮುಗ್ಧ ಬೆರಗಿನ ಪ್ರಶ್ನೆಗಳ ಸೊಗಸನ್ನು ಸರಿಯಾಗಿ ಕವನಿಸಿದ್ದೀರಿ.

  ReplyDelete
 6. Tumbaa chennaagide Pragatiyavare..

  ee nimma kavana yaana heegeye munduvareyali..

  ReplyDelete
 7. ಬೆರಗುಗಣ್ಣಿನ ಮಗುವ ಪ್ರಶ್ನೆ ಕವನವಾಗಿ ಚೆನ್ನಾಗಿ ಮೂಡಿದೆ.

  ಹಾರುವ ಹಕ್ಕಿಗೆ "ಹಾಡಲು" ಬಹುಶಃ "ಹಾರಲು' ಇರಬಹುದು ತೈಪಾಯಿಸಿದ್ದು ತಪ್ಪಾಯಿತೇನೋ ಅನಿಸಿತು.

  ReplyDelete
 8. photodalliruva yaaraddu...? chennaagide....
  maguvina kaNNalle ide ellaa prashne....

  ReplyDelete
 9. ಜೆವನವೇ ಒಂದು ಪ್ರೆಶ್ನೆ .....
  ಸುಂದರ ಸಾಲುಗಳು
  ವರ್ಣಮಯ ಸಂದೇಶಗಳು
  ನಂಬಲಾಗದ ಸಿಹಿ ಸತ್ಯಗಳು ......

  ReplyDelete
 10. ಆ ಮುದ್ದಿನ ಮೊಗದಲಿ ಬೆರಗಿನ ಕಂಗಳ ಇಟ್ಟವನು,ಎಲ್ಲವನ್ನೂ ಮಾಡಿಹನು!ಕವನ ಮಗುವಿನಷ್ಟೇ ಚಂದವಿದೆ.

  ReplyDelete
 11. ಪ್ರಗತಿ

  ನಿಸರ್ಗ ಅದ್ಭುತ ವಾದ ಶಾಲೆ

  ನಿಸರ್ಗದ ಸೋಜಿಗಕ್ಕೆ ಎಣೆಯಿಲ್ಲ
  ಎಷ್ಟೇ ತಿಳಿದರೂ ಪ್ರಕ್ರತಿಯ ಒಡಲು ಬರಿದಾಗದು
  ಸಾಲುಗಳು ಮಧುರವಾಗಿವೆ

  ReplyDelete
 12. ಉತ್ತಮ ಸಾಲುಗಳು ವಿಚಾರಪೂರಿತವಾಗಿವೆ. ಧನ್ಯವಾದಗಳು ಪ್ರಗತಿ ಅವರೆ.


  ಶುಭಾಶಯಗಳು
  ಅನ೦ತ್

  ReplyDelete
 13. ಎಲ್ಲಾ ವಿಸ್ಮಯ. ಪ್ರಪಂಚವೇ ವಿಸ್ಮಯದ ವಿಷಯ... ಚೆನ್ನಾಗಿದೆ ಮುದ್ದು ಚಿತ್ರದೊಂದಿಗೆ, ಪದ್ಯದೊಂದಿಗೆ....

  ReplyDelete
 14. ಪ್ರಗತಿ ಸುಂದರ ಚಿತ್ರಕ್ಕೆ ಸರಿಯಾಗಿ ಬರೆದ ಕವನ ಇಷ್ಟ ಆಯ್ತು.
  ಕೆಲವೊಮ್ಮೆ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದೇ ಇರೋದೇ ಒಳ್ಳೇದು ಆಲ್ವಾ!

  ReplyDelete
 15. ಸೂಪರ್.. ತುಂಬಾ ಚೆನ್ನಾಗಿದೆ

  ReplyDelete
 16. ಪ್ರಗತಿ,
  ಇಷ್ಟು ಚೆಂದದ ಕವನ ಬರೆಯಲು ಹೇಳಿಕೊಟ್ಟವರು ಯಾರು....
  ಚೆಂದದ ಕವನ....

  ReplyDelete
 17. ಹ್ಮ ಉತ್ತರ ಸಿಗದ ಪ್ರಶ್ನೆಗಳು...

  ಮಕ್ಕಳ ಫೊಟೊವಿನ ಹಿಂದಿನ ಪೋಸ್ಟ್ ಕೂಡ ಚೆನ್ನಾಗಿತ್ತು...ಬರೀತಾ ಇರಿ...

  ReplyDelete
 18. ಪ್ರಗತಿ ಅವ್ರೆ,

  ನಿಮ್ಮ ಬ್ಲಾಗ್ ಗೆ ಪ್ರಥಮ ಭೇಟಿ, ನಿಜ ಹೇಳ್ಬೇಕು ಅಂದ್ರೆ ನಿಮ್ಮ ಬ್ಲಾಗ್ ಇರೋದೇ ಗೊತ್ತಿರ್ಲಿಲ್ಲ, ಕ್ಷಮೆ ಇರಲಿ.
  ಕವನ ತುಂಬಾ ಸುಂದರವಾಗಿದೆ, ನಿಮ್ಮ ಹಳೆಯ ಬರಹಗಳನ್ನೆಲ್ಲ ಒದುತಿದ್ದೇನೆ..ಧನ್ಯವಾದಗಳು...

  ReplyDelete
 19. ತುಂಬಾ ಸಮಯದ ನಂತರ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸುತ್ತಿದ್ದೇನೆ... ಕ್ಷಮೆ ಇರಲಿ...

  ಕವನ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ತರುಣ್...

  ಚಿನ್ಮಯ್ಅವರೇ.. ಚಿತ್ತಾರಕ್ಕೆ ಸ್ವಾಗತ.. ನಿಮ್ಮ ಕವನ ಕೂಡ ಚೆನ್ನಾಗಿದೆ... ಧನ್ಯವಾದಗಳು..

  ''ಇಂತಿ ನಿನ್ನ ಪ್ರೀತಿಯ'' ಚಿತ್ರದ ಹಾಡಿನೊಂದಿಗೆ ಪ್ರತಿಕ್ರಿಯಿಸಿದ ದೊಡ್ಮಂಜು ಅವರೇ... ತುಂಬಾ ಧನ್ಯವಾದಗಳು...

  ಅಪ್ಪ-ಅಮ್ಮ ಚಿತ್ತಾರಕ್ಕೆ ಸ್ವಾಗತ.... ಪ್ರತಿಕ್ರಿಯೆಗೆ ಧನ್ಯವಾದಗಳು.. ಆಗಾಗ ಬರುತ್ತಿರಿ..

  ಸುನಾಥ್ ಸರ್... ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು...

  ಥ್ಯಾಂಕ್ಸ್ ದಿವ್ಯಾ... ನನ್ನ ಬಹುಮಾನ ಇನ್ನೂ ಸಿಕ್ಕಿಲ್ಲ,... ಬೇಗ ಕಲ್ಸಪಾ ...

  ಬಾಲು ಸರ್, ತುಂಬಾ ಧನ್ಯವಾದಗಳು... ಹೀಗೆ ಪ್ರೋತ್ಸಾಹಿಸುತ್ತಿರಿ...

  ಚೇತನಾ ಮೇಡಂ , ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ ನನ್ನ ನಮನಗಳು...

  ಸೀತಾರಾಮ್ ಸರ್, ಪ್ರತಕ್ರಿಯಿಸಿದ ನಿಮಗೂ ಧನ್ಯವಾದಗಳು... 'ಹಾರುವ ಹಕ್ಕಿಗೆ ಹಾಡಲು' ಅಂತಾನೆ ಬರೆದಿದ್ದು.. ತಪ್ಪಾಗಿದ್ದರೆ ತಿಳಿಸಿ... ತಿದ್ದಿಕೊಳ್ಳುತ್ತೇನೆ....

  ದಿನಕರ್ ಸರ್... ಅದು ಮಿಂಚಂಚೆಯಲ್ಲಿ ಬಂದ ಫೋಟೋ... ವಂದನೆಗಳು ಪ್ರತಿಕ್ರಿಯಿಸಿದ್ದಕ್ಕೆ...

  ಧನ್ಯವಾದಗಳು ಸತೀಶ್...

  ಮೂರ್ತಿ ಸರ್, ತುಂಬಾ ಧನ್ಯವಾದಗಳು... ಹೀಗೆ ಬಂದು ಪ್ರೋತ್ಸಾಹಿಸುತ್ತಿರಿ......

  ಜಿತೇಂದ್ರ ಅವರೇ... ಚಿತ್ತಾರಕ್ಕೆ ಸ್ವಾಗತ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ...

  ಗುರುಮೂರ್ತಿ ಅವರೇ...ಜಗದ ವಿಸ್ಮಯಗಳ ಮೂಲವನ್ನು ಬಲ್ಲವರಾರು ಅಲ್ವೇ... ವಂದನೆಗಳು ಪ್ರತಿಕ್ರಿಯಿಸಿದ್ದಕ್ಕೆ..

  ನಮಸ್ತೆ ಅನಂತರಾಜ್ ಸರ್ , ತುಂಬಾ ಥ್ಯಾಂಕ್ಸ್ ಪ್ರತಿಕ್ರಿಯಿಸಿದ್ದಕ್ಕೆ..

  ನನ್ನೊಳಗಿನ ಕನಸು... ಥಾಂಕ್ಯೂ ಸರ್...

  ಚಂದ್ರು ಸರ್.. ಧನ್ಯವಾದಗಳು.. ಬರುತ್ತಿರಿ...

  ಹೌದು ಶಶಿ ಮೇಡಂ... ಕೆಲವು ಪ್ರಶ್ನೆಗೆ ಉತ್ತರ ಸಿಗದೇ ಇದ್ರೆ ಪ್ರಕೃತಿ ಸ್ವಲ್ಪಮಟ್ಟಿಗಾದರೂ ಉಳಿಯತ್ತೆ.... ಧನ್ಯವಾದಗಳು...

  ಗೋಪಾಲ್ ಸರ್... ಚಿತ್ತಾರಕ್ಕೆ ಸ್ವಾಗತ... ಆಗಾಗ ಬಂದು ಪ್ರೋತ್ಸಾಹಿಸಿ...

  ಧನ್ಯವಾದಗಳು ಮಹೇಶ್ ಸರ್... ಬರುತ್ತಿರಿ...

  ಚಿತ್ತಾರಕ್ಕೆ ಸ್ವಾಗತ ಪ್ರಭುರಾಜ್ ಅವರೇ... ಪ್ರತಿಕ್ರಿಯೆಗೆ ಧನ್ಯವಾದಗಳು...ಬರುತ್ತಿರಿ...

  ಅಶೋಕ್ ಅವರೇ... ಬ್ಲಾಗ್ ನ ಬರಹಗಳನ್ನು ಓದಿ ಪ್ರತಿಕ್ರಿಸಿದ ನಿಮಗೂ ಧನ್ಯವಾದಗಳು... ಚಿತ್ತಾರಕ್ಕೆ ಆಗಾಗ ಬರುತ್ತಿರಿ...

  ReplyDelete
 20. ಸುಂದರ ಪ್ರಾಸಬದ್ದ, ಕೊನೆ ಇಲ್ಲದ ಪ್ರಶ್ನೆಗಳ ಕವನ. ಚೆನ್ನಾಗಿದೆ ಪ್ರಗತಿಯವರೇ,ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

  ReplyDelete
 21. ಸುಂದರ ಕಲ್ಪನೆ, ಉತ್ತರಿಸಲಾಗದ ಪ್ರಶ್ನೆಗಳು, ಧನ್ಯವಾದಗಳು ಪ್ರಗತಿಯವರೆ ಈ ಜಗವು ಹೀಗೂ ಉಂಟಾ ಎಂದು ಅನಿಸುತ್ತದೆ.

  ವಸಂತ್

  ReplyDelete
 22. pragatiyavare,yella vismayave.tumba chennaagide nimma kavite.abhinandanegalu.

  ReplyDelete
 23. ನಿಜ, ಇವನ್ನೆಲ್ಲ ಮಾಡುವ ಆ ಶಕ್ತಿ ಯಾವುದು? ಅದನ್ನೇನೆಂದು ಕರೆಯುವುದು - ದೇವರು, ಪ್ರಕೃತಿ, ಆತ್ಮ, ಪರಮಾತ್ಮ, ಅಣು, ಪರಮಾಣು...... ಪ್ರಶ್ನೆಗಳಿಗೆ ಉತ್ತರವಿಲ್ಲ ಅಲ್ಲವೇ ಮೇಡಮ್?

  ReplyDelete
 24. ಕೇಳುತ್ತಲೇ ಇರಬೇಕಷ್ಟೇ...ಪ್ರಶ್ನೆಗಳನ್ನ!!!

  ಯಾರು? ಯಾಕೆ? ಹೇಗೆ? ಎಲ್ಲಿ? ಏನು?

  ಜೀವನವೆಂದರೆ

  ಇವೆಲ್ಲದರ ಹುಡುಕಾಟವೇ....?

  ಕವನ ಚೆನ್ನಾಗಿದೆ.

  ReplyDelete
 25. ನಿಮಗೆ ಬ್ಲಾಗ್ ಬರೆಯಲು ಕಲಿಸಿದವರಾರು?

  ReplyDelete
 26. ಪ್ರಭಾಮಣಿಯವರೇ, ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

  ReplyDelete
 27. ಕಲಾವತಿ ಮೇಡಂ ಚಿತ್ತಾರಕ್ಕೆ ಸ್ವಾಗತ...ಕವನವನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..

  ReplyDelete
 28. ದೀಪಸ್ಮಿತ ಅವರೇ... ಪ್ರಕೃತಿಯೇ ವಿಸ್ಮಯದ ಆಗರವಲ್ಲವೇ... ಅದರ ಮೂಲ ಶಕ್ತಿಯನ್ನು ಕಂಡವರಾರು? ಪ್ರತಿಕ್ರಿಯೆಗೆ ಧನ್ಯವಾದಗಳು..

  ReplyDelete
 29. ವೆಂಕಟ ಕೃಷ್ಣ ಅವರೇ... ಚಿತ್ತಾರದ ಮನೆಗೆ ಸ್ವಾಗತ... ಕವನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ...

  ReplyDelete
 30. ಹೆಸರಿಲ್ಲದ ಅತಿಥಿ...
  ಕವನ ಅಷ್ಟು ಕೆಟ್ಟದಾಗಿದ್ದರೆ ದಯವಿಟ್ಟು ಕ್ಷಮಿಸಿ... ನಿಮ್ಮ ಹೆಸರು ಹಾಕಿ ಪ್ರತಿಕ್ರಿಯಿಸಿದರೂ ಅದಕ್ಕೆ ಸ್ವಾಗತವಿದೆ... ನನ್ನ ಮನದ ಭಾವನೆಗಳ ಚಿತ್ತಾರಕ್ಕೆ ಇದೊಂದು ಪ್ರಯತ್ನವಷ್ಟೇ... ಧನ್ಯವಾದಗಳು...

  ReplyDelete
 31. ಈ ವಿಸ್ಮಯದ ಪ್ರಶ್ನೆಗಳು ನಿಮಗೋ, ಅಥವಾ ಆ ಮುಗ್ದ ಮನದ ಮುದ್ದು ಮಗುವಿಗೋ.. ಸೊಗಸಾಗಿದೆ ಕವಿತೆ. ಸಾಗಲಿ ಪಯಣ.

  ReplyDelete