Thursday, December 8, 2011

ಪುಟ್ಟಿಯ ತಂಟೆ..

ಇವಳು ನಮ್ಮ ಮಗು...

ಏಳುವಾಗ ಮೊಗದಲ್ಲಿ ನಗು
ಜೊತೆ ಜೊತೆಯೇ ಕೇಕೆ ಕೂಗು..

ಇವಳಿಗಿಷ್ಟ ಎಣ್ಣೆಯ ಮಾಲಿಶ್
ಬೇಸರದಿ ಇದ್ದಾಗ ಮಾಡುವಳು ಪಾಲಿಶ್..

ತಲೆ ಮುಟ್ಟಿದರೆ ಬರುವುದು ಕೋಪ
ಸ್ನಾನ ಮಾಡುವಾಗ ಅಳುತ್ತಾಳೆ ಪಾಪ..

ಮುಖದಿ ತೋರುವಳು ವಿಧ ವಿಧದಾ ಭಾವ..
ನಗುವಾಗ ಇವಳು ಮಲ್ಲಿಗೆ ಹೂವ..

ಕವುಚಿ ಹಾಕಿದಾಗ ಜೋರು ಇವಳ ಕೂಗಾಟ..
ಎತ್ತಲು ಹೋದರೆ ಮಾಡುವಳು ರಂಪಾಟ..

ಕುಣಿಯುತ್ತಲೇ ಇರುವುದು ಪುಟ್ಟ ಕೈ ಕಾಲು..
ಕಾಲಲ್ಲೇ ಆಡುವಳು ಕೆಂಪನೆಯ ಬಾಲು..

ರೆಪ್ಪೆಯಾಡಿಸದೆ ನೋಡುವಳು ತಿರುಗುವ ಫ್ಯಾನು
ಬೇಕಂತೆ ಕೈಯ್ಯಲ್ಲಿ ಮೊಬೈಲ್ ಫೋನು..

ಮಾಂಗಲ್ಯದೊಡನೆ ಏನಿವಳ ಆಟ..
ತಪ್ಪಿಸಲು ಕೈ ಸಿಡುಕಿನ ನೋಟ..

ನಿಲ್ಲಿಸಿದರೆ ಮಾಡುವಳು ವಿಪರೀತ ಡೌಲು..
 ಪಪ್ಪ ಬರಲು ಏರುವಳು ಕಾಲು..
   
ಶುರುಮಾಡುವಳು ರಗಳೆ ಬರಲು ನಿದಿರೆ..
ಕಣ್ಣ ತುಂಬಿಳಿಯುವುದು ನೀರಧಾರೆ..

ಮಾಡುತ್ತಲೇ ಇರುವಳು ಏನಾದರೂ ತಂಟೆ..
ಸಾಲದು ದಿನದ ಇಪ್ಪತ್ನಾಲ್ಕು  ಗಂಟೆ..

ಇವಳು ನಮ್ಮ ಮಗು..
ಶುರುವಾಯಿತು ಇವಳ ಕೂಗು..

9 comments:

  1. sakhattaagiddu puttiya chitragalu mattu ninna saalugalu!! welcome back!!

    ReplyDelete
  2. ನಿಮ್ಮ ಮಗುವಿನ ತಂಟೆ-ತಕರಾರು ಕೇಳಿ ನಗು ಬಂತು. ಮಗುವಿಗೆ ಮತ್ತು ನಿಮಗೆ ಶುಭಾಶಯಗಳು

    ReplyDelete
  3. ಆಹಾ....
    ಎಳೆ ಎಳೆಯಾಗಿ ಚಂದವಾಗಿ ಬಂದಿದೆ
    ಮಗುವಿನ ತುಂಟಾಟ.....
    ಜೊತೆಗೆ ಫೋಟೋ ನೋಟ.....

    supper....
    ಇಷ್ಟವಾಯ್ತು..

    ReplyDelete
  4. ಪುಟ್ಟ ಮಗುವಿನ ತುಂಟಾಟದ rhythm ಅನ್ನೇ ಹೋಲುತ್ತಿರುವ ಕವನ ಚೆನ್ನಾಗಿದೆ. ಜೊತೆಗೆ ಮಗುವಿನ ಚಿತ್ರಗಳೂ ಸೊಗಸಾಗಿವೆ.

    ReplyDelete
  5. ಕಾಮೆಂಟಿಸಿದ ಎಲ್ಲರಿಗೂ ವಂದನೆಗಳು..

    ReplyDelete
  6. ನಿಮ್ಮ ಮಗಳ ಚಿತ್ರ, ಕವಿತೆ ಎರಡೂ ಚಂದಿದ್ದು :-)

    ReplyDelete