Wednesday, September 22, 2010

ಮೊಗ್ಗಿನ ಮನಸುಗಳು..

ಹಾಯ್..


ಹಲೋ..



  ಏನ್ಮಾಡ್ತಾ ಇದೀಯಾ ?


 ಫೋಟೋ ನೋಡ್ತಿದ್ದೆ..


ಏನಾದ್ರು ಆಡೋಣ್ವಾ ?

ಸರಿ, ಎಲ್ಲಾರ್ನು ಕರಿತೀನಿ..   


 ಎಲ್ರೂ ಬನ್ನಿ ... ಆಡೋಣ ...

 ಯಾವ  ಆಟನೇ? 


ಜೂಟಾಟ ಆಡೋಣ್ವಾ ? 


 ಹಮ್.. ಸರಿ..


ಏಯ್, ಇಲ್ನೋಡ್ರೋ... ಏನೋ ಇದೆ ಇಲ್ಲಿ..


ಅಯ್.. ಎಷ್ಟ್ ಮಜ ಇದೆ ಅಲ್ವಾ?! ಎಷ್ಟೊಂದ್ ಕಾಲಿದೆ ಇದಕ್ಕೆ.. 



 ಅದರ ಮೇಲೆ ಹಾಕ್ಲಾ  ಇದನ್ನ? ..


ಬೇಡ.. ಅದಕ್ಕೆ ಚೊರಟೆ  ಅಂತಾರೆ.. ಅದು ಏನು ಮಾಡಲ್ಲ..
ನೋಡಿ ಈಗ ಚಕ್ಲಿ ಮಾಡ್ತೀನಿ ಅದನ್ನ..



 ಹಹಹಹ.. ಚೊರಟೆ ಚಕ್ಲಿ...



 ನನ್ಗೆ ಭಯ ಆಗ್ತಿದೆ , ಬಾರಣ್ಣ ಇಲ್ಲಿ...



 ಹೆದರಬೇಡ ... ಏನು ಮಾಡಲ್ಲ ಅದು..


ಏನಿದೆ ಅಲ್ಲಿ ನಾನು ನೋಡ್ಬೇಕು..


ಬರ್ತೀಯಾ?


ಬೇಡ.. ಅಮ್ಮ ಬೈತಾರೆ..


ನನಗೇ ಭಯ.. ಅವ್ನ್ ಬರ್ತಾನಂತೆ..


ನನ್ ಕರ್ಕೊಂಡ್ ಹೋಗಲ್ವಾ? ನಿಲ್ಲಿ ಮಾಡ್ಸ್ತೀನಿ..


 ಅಯ್ಯೋ... ಕಾಲಿಗೆನೋ ತಾಗಿದೆ...


ಕಾಲ್ ತೊಳ್ಕೋ ಬರ್ತೀನಿ...


ನಾವೆಲ್ಲಾ ಅಡ್ಕೊಳೋಣ.. ಅವ್ಳು ಹುಡ್ಕ್ಲಿ..


ಎಲ್ಲಾ ಎಲ್ಲಿಗ್ ಹೋದ್ರು ? 



ಅಡ್ಕೊಂಡಿದೀರಾ..?  ಹುಡ್ಕ್ತೀನಿ ತಾಳಿ...


ನಾನ್ ಇಲ್ಲಿದೀನಿ ಅಂತ ಹೇಳ್ಬೇಡ..



ಆಯ್ತು.. ನನ್ನು ಆಟಕ್ಕೆ ಸೇರ್ಸ್ಗೋಳಿ ...


ಎಲ್ಲೋ ಮಾತ್ ಕೇಳ್ತಿದೆ...


ಹಹಹ... ಸಿಕ್ಬಿದ್ದ..


ಪ್ಚ್ಕ್..  ಎಲ್ಲಾರ್ನು ಹುಡ್ಕು..


ನಾನಂತು ಸಿಗಲ್ಲ...


ಹಿಡ್ಕೊಡ್ಲಾ ?


ಹಾಗಿದ್ರೆ ನೀನ್ ಬೇಡ ಆಟಕ್ಕೆ...


ಹೆಹೆ... ನಾನೇ ಹುಡ್ಕ್ದೆ..  ಹೇಗೆ?


ಬಾರೋ... ಬೇರೆ ಆಟ ಆಡ್ತೀವಿ ಈಗ...


ಇಲ್ಲೇ ಇದ್ದಿದ್ಯಾ ನೀನು?


ಯಾಕೆ ಬೇರೆ ಆಟ? ನಾನ್ ಬರಲ್ಲ.. 
ಮನೆಗ್ ಹೋಗ್ತೀನಿ.....




 ಅಲ್ನೋಡೋ ಪಾಪುನಾ... 




 ಹೇಗಿದೆ ಗೆಟಪ್ಪು?



ಉಮ್ಮ್ಮ್ಮ್.... ಸಖತ್ ಮಿಂಚಿಂಗು... 



ಮತ್ತೀಗ ?


ಎಲ್ಲರಿಗೂ ಮನೇಲಿ ಕರೀತಿದಾರೆ ...
ನಡೀರಿ ಹೋಗೋಣ... ಟಾಟಾ..


ಟಾಟಾ... ನಾಳೆ ಮತ್ತೆ ಆಡೋಣ .... 

47 comments:

  1. ಆಟ ದ ಜೊತೆ ಫೋಟೋ ಚನ್ನಾಗಿದೆ

    ReplyDelete
  2. ಪ್ರಗತಿ ಮಕ್ಕಳ ನೋಟವೇ ಚೆಂದ .
    .ಅವುಗಳ ನೋಟಕ್ಕೆ ಸರಿಯಾಗಿ ನಿಮ್ಮ ವಿವರಣೆ ಇಷ್ಟ ಆಯಿತು.ತುಂಬಾ ಖುಷಿ ಆಯ್ತು.

    ReplyDelete
  3. ಪ್ರಗತಿ,
    ತುಂಬ ಸುಂದರವಾದ ಚಿತ್ರಗಳನ್ನು ಹಾಕಿದ್ದೀರಿ. ಅಲ್ಲಿಯ ಭಾವನೆಗಳಿಗೆ ತಕ್ಕಂತ caption ಕೊಟ್ಟಿದ್ದೀರಿ. ಒಂದು ಫೋಟೋ-ಧಾರವಾಹಿ ಓದಿದ ಅನುಭವ ಆಗುತ್ತೆ.

    ReplyDelete
  4. ಮನಮುಕ್ತಾ ಮೇಡಂ, ತುಂಬಾ ಧನ್ಯವಾದಗಳು...

    ReplyDelete
  5. ಧನ್ಯವಾದ ದೊಡ್ಮಂಜು ಅವರಿಗೆ.... ಫೋಟೋದ ಆಟವನ್ನು ಇಷ್ಟಪಟ್ಟಿದ್ದಕ್ಕೆ...

    ReplyDelete
  6. ನನ್ನೊಳಗಿನ ಕನಸು....
    thanks alot...

    ReplyDelete
  7. ಶಶಿ ಅವರೇ, ಮೊಗ್ಗಿನ ಮನಸುಗಳು ಖುಷಿ ಕೊಟ್ಟಿದ್ದ ಕೇಳಿ ಸಂತೋಷವಾಯಿತು.... ಧನ್ಯವಾದ...

    ReplyDelete
  8. ಪ್ರಗತಿ ಹೆಗಡೆಯವರೆ,
    ಚಂದದ ಮುದ್ದಾದ ಮಕ್ಕಳ ಫೊಟೋಗಳು,
    ಸೂಪರ್........

    ReplyDelete
  9. ತುಂಬಾ ತುಂಬಾ ಧನ್ಯವಾದಗಳು ಸುನಾಥ್ ಸರ್... ಮೊಗ್ಗಿನ ಮನಸಿಗೆ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದೀರಿ....

    ReplyDelete
  10. ಪ್ರವೀಣ್ ಅವರೇ, ತುಂಬಾ ಧನ್ಯವಾದಗಳು....

    ReplyDelete
  11. ವಿವಿಧ ಭಂಗಿಗಳಲ್ಲಿನ ಮಕ್ಕಳ ಚಿತ್ರಗಳು ತುಂಬಾ ಸುಂದರವಾಗಿವೆ. ಈ ಕ್ಷಣಗಳನ್ನು ಸೆರೆಹಿಡಿದು ನಮಗೆಲ್ಲಾ ತೋರಿಸಿ ಖುಷಿ ಕೊಟ್ಟಿದ್ದೀರಿ.
    ಧನ್ಯವಾದಗಳು.

    ReplyDelete
  12. ಸು೦ದರ ಚಿತ್ರಗಳನ್ನು ತೋರಿಸಿ ಮನ ಮುದಗೊಳಿಸಿದ್ದೀರಿ..ವ೦ದನೆಗಳು


    ಅನ೦ತ್

    ReplyDelete
  13. ಚಿತ್ರ ನೋಡಿ ಖುಷಿಪಟ್ಟರೆ ಪ್ರಯತ್ನ ಸಾರ್ಥಕ... ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಚಂದ್ರುರವರೆ...

    ReplyDelete
  14. ತುಂಬಾ ಚಂದ ಬಂದ್ಯು!

    ReplyDelete
  15. ಮಕ್ಕಳ ವಿವಿಧ ಆಕರ್ಷಕ ಭ೦ಗಿಯ ಫೋಟೋಗಳನ್ನು ನೋಡಿ ಖುಷಿ ಆಯ್ತು,
    ಪುಟ್ಟಗೌರಿ ಆಗಮನ ಯಾವಾಗ ???

    ReplyDelete
  16. ಒಳ್ಳೆ ಫೋಟೋಗಳ ಸಂಕಲನ, ಭೇಷ್!
    ನನ್ನ ಬ್ಲಾಗಿಗೆ ನಿಮಗೆ ಸ್ವಾಗತ...

    ReplyDelete
  17. ಪ್ರಗತಿ ಮೇಡಮ್,
    ತುಂಬಾ ಚೆನ್ನಾಗಿದೆ..... ಮುದ್ದು ಮುದ್ದು ಮಕ್ಕಳ ಫೊಟೊ ಜೊತೆಗೆ ಅದಕ್ಕೆ ತಕ್ಕ ಮಾತುಗಳು ಚೆನ್ನಾಗಿದ್ದವು......

    ReplyDelete
  18. ಥ್ಯಾಂಕ್ಸ್ ಚಿನ್ಮಯ್ಅಣ್ಣ... ಚಿತ್ತಾರಕ್ಕೆ ಸ್ವಾಗತ...

    ReplyDelete
  19. ಚಿತ್ತಾರಕ್ಕೆ ಆತ್ಮೀಯ ಸ್ವಾಗತ ಲಕ್ಷ್ಮಣ್ ಸರ್... ಧನ್ಯವಾದಗಳು... ಆಗಾಗ ಬಂದು ಪ್ರೋತ್ಸಾಹಿಸುತ್ತಿರಿ...

    ReplyDelete
  20. ಚಿತ್ರವನ್ನು ನೋಡಿ ಇಷ್ಟಪಟ್ಟು ಪ್ರತಿಕ್ರಿಯಿಸಿದ ಪರಾಂಜಪೆ ಸರ್ ಗೆ ವಂದನೆಗಳು... ಗೌರಿ ಹಬ್ಬ ಮುಗಿದುಹೋಯ್ತಲ್ಲ ಸರ್.. :-)

    ReplyDelete
  21. ಚಿತ್ತಾರಕ್ಕೆ ಸ್ವಾಗತ ಬದರಿನಾಥ್ ಸರ್ ಗೆ.... ಆಗಾಗ ಬರುತ್ತಿರಿ...

    ReplyDelete
  22. ತುಂಬಾ ಧನ್ಯವಾದಗಳು ದಿನಕರ್ ಸರ್....

    ReplyDelete
  23. ಮುದಗೊಂಡು ಪ್ರತಿಕ್ರಿಯಿಸಿದ ಅನಂತ್ ಸರ್ ಗೆ ವಂದನೆಗಳು... ಆಗಾಗ ಬಂದು ಹೀಗೆ ಪ್ರೋತ್ಸಾಹಿಸುತ್ತಿರಿ...

    ReplyDelete
  24. ಸೂಪರ್.. ಮೇಡಂ..
    ಚಿಣ್ಣರ ಲೋಕವನ್ನು ಬಣ್ಣ ತುಂಬಿ ಬಿತ್ತಿದ್ದೀರಿ

    ReplyDelete
  25. ಪ್ರಗತಿ,

    ನಿಮ್ಮ ಬ್ಲಾಗ್ ಇವತ್ತೇ ನೋಡಿದ್ದು. ತುಂಬ ಚೆನ್ನಾಗಿದೆ. ಮೊಗ್ಗಿನ ಮನಸು ಅಂತೂ ತುಂಬ ಖುಶಿ ಕೊಡ್ತು. ಬರೀತಿರಿ. ಶುಭವಾಗಲಿ :)

    ReplyDelete
  26. ಚಿಣ್ಣರ ಲೋಕದ ಬಣ್ಣವನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ ''ಕತ್ತಲೆಮನೆ'' ತುಂಬಾ ಧನ್ಯವಾದಗಳು...

    ReplyDelete
  27. ಪ್ರಗತಿ...ಓಹ್...ನನ್ನ ದಿನದ ಆಯಾಸ ಎಲ್ಲಾ ಮಾಯ ...ಚೋ..ಚೋ..ಚ್ ಚ್ವೀಟ್...ಹಹಹಹ.....ಮಗುವಿನೊಂದಿಗೆ ಮಗುವಾಗುವ ಬಯಕೆ...ಈ ಮನಕೆ...ಥ್ಯಾಂಕ್ಸ್.

    ReplyDelete
  28. ಮಕ್ಕಳೆಲ್ಲರೂ ಸುಂದರ ಹೂಗಳು..

    ಎಲ್ಲ ಹೂಗಳೂ ಸೂಪರ್.. !!

    ReplyDelete
  29. ಮುದ್ದಾದ ಮಕ್ಕಳ ಚಿತ್ರಗಳು ಮತ್ತು ಭಾವನೆಗಳಿಗೊಪ್ಪುವ ಕ್ಯಾಪ್ಶನ್ಸ್ ಗಳು. ಚೆನ್ನಾಗಿದೆ

    ReplyDelete
  30. ಶುಭದಾ ಅವ್ರೆ.... ಚಿತ್ತಾರಕ್ಕೆ ಹೃದಯಪೂರ್ವಕ ಸ್ವಾಗತ.... ನಿಮ್ಮ ಶುಭಕಾಮನೆಗಳಿಗೆ ಧನ್ಯವಾದಗಳು...

    ReplyDelete
  31. ಆಜ಼ಾದ್ ಸರ್... ಮನಸಿನ ಮಾತುಗಳಿಂದ ಸಂತಸಹೊಂದಿ ಪ್ರತಿಕ್ರಿಯಿಸಿದ ನಿಮಗೆ ಮನ:ಪೂರ್ವಕ ನಮನಗಳು...

    ReplyDelete
  32. ಪ್ರಕಾಶಣ್ಣ,
    ಮೊಗ್ಗಿನ ಮನದ
    ಮುಗ್ಧ ಮೊಗದ
    ಮಕ್ಕಳನ್ನು
    ಹೂವೆಂದು
    ಅರಳಿಸಿ ಬಣ್ಣಿಸಿದ
    ನಿಮಗಿದೋ
    ನನ್ನ ನಮನ...
    ಧನ್ಯವಾದಗಳು...

    ReplyDelete
  33. ಸುಭ್ರಮಣ್ಯಅವರೇ... ನನ್ನ ಬ್ಲಾಗ್ ಮನೆಗೆ ಸ್ವಾಗತ.. ಆಗಾಗ ಬಂದು ಪ್ರೋತ್ಸಾಹಿಸುತ್ತಿರಿ... ನಮಸ್ಕಾರ...

    ReplyDelete
  34. atada jote sundara photogalu tumba chabbagive

    ReplyDelete
  35. ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು ಸತೀಶ್... ಆದರೆ 'chabbagive' ಅಂದ್ರೇನು ಅಂತ ಗೊತ್ತಾಗಿಲ್ಲ... :-)

    ReplyDelete
  36. ಧನ್ಯವಾದಗಳು ಗುರುಪ್ರಸಾದ್ ಸರ್...

    ReplyDelete