Sunday, July 19, 2015
Friday, January 9, 2015
ಕುಡಿಕಥೆ- ಕೋಪ
ಅವಳು ಯಾವಾಗಲೂ ಹಾಗೆ... ಬೇಗ ಕೋಪಿಸಿಕೊಳ್ಳುತ್ತಾಳೆ.. ಅದೂ ಅಂತಿಂತ ಕೋಪವಲ್ಲ... ಭಯಂಕರ ಕೋಪ... ಅದಕ್ಕೇ ಅವಳ ಅಜ್ಜಿ ಹೇಳುತ್ತಿದ್ದುದು "ಅಪ್ಪನ ಸಿಟ್ಟೆಲ್ಲಾ ನಿನಗೇ ಬಂದಿದೆ" ಅಂತ... ಆ ಕೋಪಕ್ಕೆ ಅಂತಿಂತ ಕಾರಣವೇ ಇರಬೇಕೆಂದಿಲ್ಲ..." ನೀನು ಮಾಡಿದ್ದು ಸರಿಯಲ್ಲ" ಎಂದರೂ ಸಾಕು...
ಈಗ ಅವಳ ಕಷ್ಟ ಕೇಳುವವರು ಯಾರೂ ಇಲ್ಲ. ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ತವರಿನ ಬಾಂಧವ್ಯವೂ ಇಲ್ಲ. ತನಗಿಂತ ದುಪ್ಪಟ್ಟು ಕೋಪವಿರುವ ಮಗನನ್ನು ಬೆಳೆಸುವ ಜವಾಬ್ದಾರಿ ಬೇರೆ.
ಈಗ ಅವಳ ಕಷ್ಟ ಕೇಳುವವರು ಯಾರೂ ಇಲ್ಲ. ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ತವರಿನ ಬಾಂಧವ್ಯವೂ ಇಲ್ಲ. ತನಗಿಂತ ದುಪ್ಪಟ್ಟು ಕೋಪವಿರುವ ಮಗನನ್ನು ಬೆಳೆಸುವ ಜವಾಬ್ದಾರಿ ಬೇರೆ.
Monday, December 1, 2014
ಹರೆಯ
ಹೊರಟಿತ್ತು ಸವಾರಿ
೭೦ ರ ಹರೆಯದ
ದಂಪತಿಗಳು..
ಬದುಕನ್ನು ಸವರಿ
ಎಷ್ಟೆಷ್ಟೋ ಮರೆಯದ
ಸಂಗತಿಗಳು....
೭೦ ರ ಹರೆಯದ
ದಂಪತಿಗಳು..
ಬದುಕನ್ನು ಸವರಿ
ಎಷ್ಟೆಷ್ಟೋ ಮರೆಯದ
ಸಂಗತಿಗಳು....
ಹಿಂದೊಂದು ದಿನ
ಆತ ಕುಳಿತಿದ್ದ
ಅಂಗಳದಿ..
ಗುಲಾಬಿಯ ಮುಡಿದು
ಬಂದಳಾಗ ಆತನ
ಪ್ರಿಯ ಮಡದಿ....
ಆತ ಕುಳಿತಿದ್ದ
ಅಂಗಳದಿ..
ಗುಲಾಬಿಯ ಮುಡಿದು
ಬಂದಳಾಗ ಆತನ
ಪ್ರಿಯ ಮಡದಿ....
ಇಂದು ವಿಶೇಷಕೆ
ಏನ ಮಾಡಲಿ
ಸಿಹಿಯ..
ಎಂದು ಕೇಳಲು
ಹೇಳಿದನವಳ
ಇನಿಯ....
ಏನ ಮಾಡಲಿ
ಸಿಹಿಯ..
ಎಂದು ಕೇಳಲು
ಹೇಳಿದನವಳ
ಇನಿಯ....
ಇಂದಿಗೆ ಒಂದು
ವರುಷ
ನಮ್ಮ ಬಾಳಿಗೆ..
ನೀ ತಂದೆ
ಹರುಷ
ನನ್ನ ಪಾಲಿಗೆ....
ವರುಷ
ನಮ್ಮ ಬಾಳಿಗೆ..
ನೀ ತಂದೆ
ಹರುಷ
ನನ್ನ ಪಾಲಿಗೆ....
ನಿನಗೇನಿಷ್ಟ
ಅದೇ
ಆಗಲಿ..
ನಮ್ಮೀ ಬದುಕು
ನಗು ನಗುತ
ಸಾಗಲಿ....
ಅದೇ
ಆಗಲಿ..
ನಮ್ಮೀ ಬದುಕು
ನಗು ನಗುತ
ಸಾಗಲಿ....
ಅಂದು ಮಾಡಿದ್ದಳು
ಆ ಸತಿ ಅವನಿಷ್ಟದ
ಹೋಳಿಗೆ..
ಮೆಲಕು ಹಾಕುವರಿಂದು
೫೦ ರ ಬಾಂಧವ್ಯದ
ಬಾಳಿಗೆ....
ಆ ಸತಿ ಅವನಿಷ್ಟದ
ಹೋಳಿಗೆ..
ಮೆಲಕು ಹಾಕುವರಿಂದು
೫೦ ರ ಬಾಂಧವ್ಯದ
ಬಾಳಿಗೆ....
ಇಂದಿಗೂ ಅದೇ
ಒಪ್ಪಂದ
ಅವರ ದಾಂಪತ್ಯದಲಿ..
ಇಂದೂ ೫೦ರ
ಹೋಳಿಗೆಯ
ಊಟ ಸಂತ್ರಪ್ತದಲಿ....
ಒಪ್ಪಂದ
ಅವರ ದಾಂಪತ್ಯದಲಿ..
ಇಂದೂ ೫೦ರ
ಹೋಳಿಗೆಯ
ಊಟ ಸಂತ್ರಪ್ತದಲಿ....
Wednesday, August 15, 2012
ಶುಭಾಷಯ ..
ಅಂದು ನೀ ಭುವಿಗೆ ಬಂದ ದಿನವೇ
ನೀ ನನಗೆ ನೀಡಿದೆ 'ಅಮ್ಮ' ಎಂಬ ಪದವಿ
ನಗುವಲ್ಲಿ ಆಳುವಲ್ಲಿ ಆಟ ನೋಟಗಳಲ್ಲಿ
ನೀ ಕಳೆದೆ ನಾನನುಭವಿಸಿದಾ ನೋವ ..
ದಿನವುರುಳಿ ಹೋಗುತಿರೆ ಏರುತಿರೆ ತಂಟೆ
ಹೊರಳಾಡಿ ಹರಿದಾಡಿ ಬಿದ್ದು ಒದ್ದಾಡಿ
ಕುಳಿತು ನಿಂತು ಕುಣಿದಾಡಿ ಓಡಾಡಿ
ಆಗೇ ಹೋಯಿತು ನೋಡು ನಿನಗೊಂದು ವರ್ಷ...
ಆ ಸಂಭ್ರಮಕೆ ನಿನಗಿದೋ ನನ್ನ ಉಡುಗೊರೆ
ನಗುತಿರು ಹೀಗೆ ಮಂಜಿನ ಹಾಗೆ
ಕಷ್ಟ ಅಂಜಲಿ ನಿನ್ನ ನಗುವ ನೋಡಿ
ಇರಲಿ ಧೀರ್ಘಾಯುಷ್ಯ ನಿನ್ನ ಜೋಡಿ
ಕುಗ್ಗದಿರು ಹಿಗ್ಗದಿರು ಕೊರಗದಿರು ಮರುಗದಿರು
ಸ್ವಾಭಿಮಾನವ ಬಿಡದಿರು ಮತ್ತೆ
ಜನರೊಳಗೊಂದಾಗಿ ಬಾಳುವುದ ಕಲಿ ನೀನು
ಬೆಳೆಯಮ್ಮ ನಾವೆಲ್ಲ ಹೆಮ್ಮೆ ಪಡುವಂತೆ ...
ಆಶೀರ್ವಾದದೊಂದಿಗೆ -
ಅಪ್ಪ-ಅಮ್ಮ
(ನಭಾಳ 1ನೇ ವರ್ಷದ ಹುಟ್ಟಿದ ಹಬ್ಬದ(ಜೂನ್ 14) ಪ್ರಯುಕ್ತ)
Wednesday, August 1, 2012
ಬದುಕಿನ ದಾರಿ ...
ನೂರಾರು ಕನಸುಗಳ ನೆನಪಿಸುವ ಬೀದಿಯದು
ನೀನೊಮ್ಮೆ ತಿರುಗಿ ನೋಡಲ್ಲಿ ಹಾಸಿಹುದು ನಿನಗಾಗಿ
ಕೆಂಪನೆಯ ರತ್ನಗಂಬಳಿ ಹಸಿರು ಮರಗಳ ನಡುವಲಿ..
ಹೋಗೋಣ ಇನ್ನೊಮ್ಮೆ ಜೊತೆಯಾಗಿ ಕೈ ಹಿಡಿದು
ಕಳೆಯೋಣ ಕ್ಷಣಗಳನು ಸಂಜೆಯ ಗಳಿಗೆಯಲಿ
ನೀನಂದು ನುಡಿದಂತ ಸಾಲನಿನ್ನೊಮ್ಮೆ ನೀಹೇಳು
ಕೇಳುವೆನು ತನ್ಮಯದಿ ನಿನ್ಹೆಗಲಿಗೊರಗಿ..
ಸುಖ ದುಃಖಗಳಲಿ ನಾನಿರುವೆ ಜೊತೆಯಾಗಿ
ಬಾಳಲ್ಲಿ ತುಂಬಿರಲಿ ಕಡಲಾಳದ ಪ್ರೀತಿ
ನೆಮ್ಮದಿಯ ಜೀವನವು ನಮದಿರಲಿ ಅನುಗಾಲ
ಎಂದೆಂದೂ ಇರಲಿ ಜೀವನ ಇದೇ ರೀತಿ..
Thursday, December 8, 2011
ಪುಟ್ಟಿಯ ತಂಟೆ..
ಏಳುವಾಗ ಮೊಗದಲ್ಲಿ ನಗು
ಜೊತೆ ಜೊತೆಯೇ ಕೇಕೆ ಕೂಗು..
ಇವಳಿಗಿಷ್ಟ ಎಣ್ಣೆಯ ಮಾಲಿಶ್
ಬೇಸರದಿ ಇದ್ದಾಗ ಮಾಡುವಳು ಪಾಲಿಶ್..
ತಲೆ ಮುಟ್ಟಿದರೆ ಬರುವುದು ಕೋಪ
ಸ್ನಾನ ಮಾಡುವಾಗ ಅಳುತ್ತಾಳೆ ಪಾಪ..
ನಗುವಾಗ ಇವಳು ಮಲ್ಲಿಗೆ ಹೂವ..
ಕವುಚಿ ಹಾಕಿದಾಗ ಜೋರು ಇವಳ ಕೂಗಾಟ..
ಎತ್ತಲು ಹೋದರೆ ಮಾಡುವಳು ರಂಪಾಟ..
ಕುಣಿಯುತ್ತಲೇ ಇರುವುದು ಪುಟ್ಟ ಕೈ ಕಾಲು..
ಕಾಲಲ್ಲೇ ಆಡುವಳು ಕೆಂಪನೆಯ ಬಾಲು..
ರೆಪ್ಪೆಯಾಡಿಸದೆ ನೋಡುವಳು ತಿರುಗುವ ಫ್ಯಾನು
ಬೇಕಂತೆ ಕೈಯ್ಯಲ್ಲಿ ಮೊಬೈಲ್ ಫೋನು..
ಮಾಂಗಲ್ಯದೊಡನೆ ಏನಿವಳ ಆಟ..
ತಪ್ಪಿಸಲು ಕೈ ಸಿಡುಕಿನ ನೋಟ..
ನಿಲ್ಲಿಸಿದರೆ ಮಾಡುವಳು ವಿಪರೀತ ಡೌಲು..
ಪಪ್ಪ ಬರಲು ಏರುವಳು ಕಾಲು..
ಶುರುಮಾಡುವಳು ರಗಳೆ ಬರಲು ನಿದಿರೆ..
ಕಣ್ಣ ತುಂಬಿಳಿಯುವುದು ನೀರಧಾರೆ..
ಮಾಡುತ್ತಲೇ ಇರುವಳು ಏನಾದರೂ ತಂಟೆ..
ಸಾಲದು ದಿನದ ಇಪ್ಪತ್ನಾಲ್ಕು ಗಂಟೆ..
ಇವಳು ನಮ್ಮ ಮಗು..
ಶುರುವಾಯಿತು ಇವಳ ಕೂಗು..
Tuesday, September 20, 2011
Saturday, February 26, 2011
ನಾನೇನ ನೀಡಲಿ ಗೆಳೆಯಾ??
ಚಿತ್ರಕೃಪೆ: ಅಂತರ್ಜಾಲ
ಗೆಳೆಯಾ..
ನೀ ನೀಡಿದ ಮುತ್ತಿನ ಮಳೆಗೆ
ನಾ ಏನ ನೀಡಲಿ ಕೊಡುಗೆ..?
ಬಾಳ ಬಂಡಿಯಲಿ ಜೊತೆಯಾದ ಸುಂದರ
ಮನಸಿನ ಮಂದಿರಕೆ ನೀನಾದೆ ಸರದಾರ..
ಹರಿಸಿದೆ ಪ್ರೇಮದ ಮಹಾಪುರ
ಪೋಣಿಸಿದೆ ಆಸೆಯ ನೂಪುರ..
ಹಾಲು ಜೇನಂಥ ಅನುಬಂಧವ ಬೆಸೆದೆ
ಕನಸಿಗೆ ಕನಸ ಜೊತೆಯಲ್ಲೇ ಹೊಸೆದೆ..
ಕಣ್ಣಲ್ಲಿ ಕಣ್ಣಿಟ್ಟು ಹರಿಸಿದೆ ಒಲವ
ಭಾವನೆಗಳ ಪೋಷಿಸಿದ ಚೆಲುವ..
ಜೀವನದ ಹಾದಿಗೆ ನೀ ಹಾಸಿದೆ ರತ್ನಗಂಬಳಿ
ಹೇಳು ನಾನೇನ ನೀಡಲಿ ನಿನಗಾಗಿ ಬಳುವಳಿ..?
Tuesday, December 7, 2010
ಮೌನದ ಮನೆ ಸೇರಿದಾಗ....
ಮನದ ಹಕ್ಕಿ
ರೆಕ್ಕೆ ಬಿಚ್ಚಿ
ರೆಕ್ಕೆ ಬಿಚ್ಚಿ
ಹಾರಬಯಸಿದೆ..
ನೋಟದಲ್ಲೇ ಮುದ್ದುಗರೆವ
ಗೆಳೆಯನಪ್ಪುಗೆ
ಬಯಸಿದೆ..
ಬಾಂದಳದ ಚಂದ್ರ
ನಮ್ಮನೋಡಿ
ನಕ್ಕಂತೆನಿಸಿದೆ..
ಅಲೆ ಅಲೆಯಾಗಿ
ಬೀಸೋ ಗಾಳಿ
ಏನೋ ಹೇಳಿದಂತಿದೆ..
ಜಾಜಿ ಹೂವು ಪಾರಿಜಾತ
ಬಿರಿದು
ಹಾರೈಸಿದಂತಿದೆ..
ಬೆರಳುಗಳೊಳಗೆ
ಬೆರಳ ಬೆರೆಸೆ
ಪ್ರೀತಿ ಮಾತು ಮೂಡಿದೆ..
ದೂರದಿಂದ
ಕೇಳುತಿಹ ಹಾಡು
ಮಧುರವಾಗಿದೆ..
ಅರಳುತಿರುವ
ಮಲ್ಲೆ ಮೊಗ್ಗು ಈ
ಖುಷಿಯ ಜೊತೆಗಿದೆ..
ನಿನ್ನ ತೋಳ
ಬಂಧಿಯಾಗೆ
ಮೌನ ಮನೆಯ ಮಾಡಿದೆ..
Subscribe to:
Posts (Atom)







